ಬೆಂಗಳೂರು:ಸಚಿವನಾಗಬೇಕು ಎಂದು ನನ್ನ ಹಣೆಯಲ್ಲಿ‌ ಬರೆದಿದ್ದರೆ ಸಚಿವ ಆಗೋದನ್ನು ತಪ್ಪಿಸಲು ಯಾರಿಂದರೂ ಆಗಲ್ಲ. ಆದರೆ, ಅದಕ್ಕೆ ದೈವ ಕೃಪೆ ಬೇಕಲ್ವಾ… ಎಂದು ಆರ್​ ಆರ್​ ನಗರ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಅರುಣ್ ಸಿಂಗ್ ಅವರನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ. ನನಗೆ ಮೂರು ತಿಂಗಳು ಸುಮ್ಮನಿರಲು ಹೇಳಿದ್ದಾರೆ ಎನ್ನುವ ಮೂಲಕ 3 ತಿಂಗಳ ನಂತರ ಸಚಿವರಾಗುವ ಮುನ್ಸೂಚನೆ ನೀಡಿದರು. ಎಸ್.ಬಿ.ಎಂ. (ಸೋಮಶೇಖರ್, ಬೈರತಿ, ಮುನಿರತ್ನ) ಎಂಬ ಬ್ರ್ಯಾಂಡ್ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನಿರತ್ನ, ಈಗ ಎಸ್​ಬಿಎಂ ಇಲ್ಲ. ವಿಶ್ವೇಶ್ವರಯ್ಯ ಅವರು ಕಟ್ಟಿದ ಎಸ್​ಬಿಎಂ ಎಲ್ಲಿದೆ? ಅದು ಈಗ ಎಸ್​ಬಿಐ ಆಗಿದೆ ಎಂದ ಮುನಿರತ್ನ, ಪರೋಕ್ಷವಾಗಿ ಸ್ನೇಹಿತರಾರ ಎಸ್.ಟಿ. ಸೋಮಶೇಖರ್, ಬೈರತಿ‌ ಬಸವರಾಜ್​ಗೆ ಟಾಂಗ್ ಕೊಟ್ಟರು. ಜೊತೆಯಲ್ಲಿ ಬಂದವರು ನೆರವಿಗೆ ನಿಲ್ಲದಿರುವ ಬಗ್ಗೆ ಅಸಮಧಾನ ಹೊರಹಾಕಿದರು.ಇದನ್ನೂ ಓದಿರಿ3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸದಷ್ಟು ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ
ಸ್ನೇಹಿತ ಶಾಸಕರೆಲ್ಲಾ ಸಚಿವರಾಗಿ ತುಂಬಾ ಬಿಜಿ ಆಗಿದ್ದಾರೆ. ನನಗೇನು ತೊಂದರೆ ಇಲ್ಲ. ಕ್ಷೇತ್ರದ ಕೆಲಸ ಮಾಡಿಕೊಂಡು ಇರ್ತೇನೆ. ಅವರೆಲ್ಲ ಸಿಕ್ಕಾಪಟ್ಟೆ ಬಿಜಿ. ಬೆಳಗ್ಗೆ ಎದ್ದು ಫೋನ್ ಮಾಡಿದ್ರೆ ಒಬ್ಬರು ದಾವಣೆಗೆರೆ ಅಂತಾರೆ. ಇನ್ನೊಬ್ಬರು ಕೆಲಸದಲ್ಲಿ ಫುಲ್ ಬಿಜಿ. ಬಿಜೆಪಿ ಮತ್ತು ಸರ್ಕಾರಕ್ಕಾಗಿ ಪಾಪ ಪ್ರಾಮಾಣಿಕತೆಯಿಂದ ದುಡಿಯುತ್ತಿರೋದು ಇವರೇ… ಎನ್ನುವ ಮೂಲಕ ಮುನಿರತ್ನ, ಪರೋಕ್ಷವಾಗಿ ಭೈರತಿ ಬಸವರಾಜು ಮತ್ತು ಎಸ್​.ಟಿ.ಸೋಮಶೇಖರ್​ ನಡೆಗೆ ಬೇಸರ ವ್ಯಕ್ತಪಡಿಸಿದರು.ಇದನ್ನೂ ಓದಿರಿಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ನನಗೆ ಇಡಿ, ಐಟಿ ಗೊತ್ತಿಲ್ಲ. ಲೋಕಾಯುಕ್ತದ ಹತ್ತಿರಕ್ಕೂ ನಾನು ಹೋಗಿಲ್ಲ. ಇಲ್ಲಿಯವರೆಗೂ ಐಟಿಯಿಂದ ನನಗೆ ಒಂದೇಒಂದು ನೋಟಿಸ್ ಬರದಂತೆ ಟ್ಯಾಕ್ಸ್ ಕಟ್ಟಿಕೊಂಡು ಹೋಗ್ತಿದ್ದೇನೆ. ನನ್ನ ಮೇಲೆ ಕೆಲವು ಚುನಾವಣಾ ಪ್ರಕರಣಗಳಿವೆ ಅಷ್ಟೆ. ಚುನಾವಣೆಯಲ್ಲಿ ನಾನು ಗೆಲ್ಲಲು ಮಾಡಿರುವ ಸ್ಟಾಟರ್ಜಿಯನ್ನು ಎಲ್ಲರೂ ಮಾಡ್ತಾರೆ ಎಂದರು.
ಇನ್ನು ನಾನು ಸಚಿವನಾಗಲಿಲ್ಲ ಅಂತಾ‌ ಪಕ್ಷ, ಸಿಎಂ, ವರಿಷ್ಠ ನಾಯಕರ ವಿರುದ್ಧ ಮಾತಾಡುವವನಲ್ಲ. ಕೆಲವರು ಮಾತಾಡ್ತಿರೋದನ್ನ ನೋಡ್ತಿದ್ದೇನೆ. ಹಾಗೆ ಮಾತಾಡಬಾರದು. ನನ್ನ ಪ್ರಕಾರ ಅದು ತಪ್ಪು. ಕ್ಷೇತ್ರದ ಕೆಲಸ ಮಾಡಲು ಸಿಎಂ ಯಡಿಯೂರಪ್ಪ ಸಂಪೂರ್ಣ ಸಹಕಾರ ನೀಡ್ತಿದ್ದಾರೆ ಎಂದರು.
ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

https://app.bitly.com/Bk52bwjriNH/bitlinks/3orsB16?offset=30
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × one =
Remember me
