ಬೆಂಗಳೂರು:ಭಿಕ್ಷುಕರಿಗೂ ರಾಜಕಾರಣಿಗಳಿಗೂ ಏನೂ ವ್ಯತ್ಯಾಸವಿಲ್ಲವೆಂದ ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನಿರತ್ನ. ಮತದಾನದ ಪರಿಸ್ಥಿತಿ, ಮತಗಟ್ಟೆಯತ್ತ ಮತದಾರರು ಬರುತ್ತಿರುವುದನ್ನು ವೀಕ್ಷಿಸಲು ಮತಗಟ್ಟೆಗಳಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿಕ್ಷುಕರು ಅಮ್ಮಾ ತಾಯಿ ಕವಳ ಹಾಕಿ ಅಂತಾರೆ. ರಾಜಕಾರಣಿಗಳು ಅಮ್ಮಾ ತಾಯಿ ಮತ ಹಾಕಿ ಎಂದು ಮೊರೆಯಿಡುತ್ತಾರೆ ಎಂದರು.
ಮಾತಿನ ಚಕಮಕಿ:ನಾಗರಬಾವಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 290ರ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪರಿಸ್ಥಿತಿ ತಿಳಿಗೊಳಿಸಿದರು. ಬಿಜೆಪಿ ಕಾರ್ಯಕರ್ತರು ಕೇಸರಿ ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದಕ್ಕೆ ಕೈ ಕಾರ್ಯಕರ್ತರು ಆಕ್ಷೇಪಿಸಿದರೆ, ಯಾವುದೇ ಬಣ್ಣದ ಬಟ್ಟೆ ಹಾಕಿಕೊಳ್ಳಬಹುದು ಎಂದು ಬಿಜೆಪಿ ಕಾರ್ಯಕರ್ತರು ಸಮರ್ಥಿಸಿಕೊಂಡರು.
ಇದನ್ನೂ ಓದಿ:ಯುವ ಮಾಸ್ ಎಂಟ್ರಿ: ಅಪ್ಪ-ಚಿಕ್ಕಪ್ಪನ ಸಮ್ಮುಖದಲ್ಲಿ ಚಂದನವನಕ್ಕೆ ಆಗಮನ
ಸಿಎಂ ಎಂದಿನಂತೆ ಕಾರ್ಯಮಗ್ನ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಿ, ಕಡತಗಳನ್ನು ಪರಿಶೀಲಿಸಿದರು. ಈ ನಡುವೆ ರಾ ರಾ ನಗರ ಮತ್ತು ಶಿರಾ ಕ್ಷೇತ್ರದ ಮತದಾನ ಪ್ರಮಾಣ, ಸ್ಪಂದನೆ ಕುರಿತು ಆಗಾಗ್ಗೆ ಮಾಹಿತಿ ಪಡೆಯುತ್ತಿದ್ದರು.
ಆರ್​ ಆರ್ ನಗರದಲ್ಲಿ 16 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ: ಮತದಾನ ಶುರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 20 =
Remember me
