ಮಂಗಳೂರು:ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಕೊಲೆಗೆ ಪ್ರತೀಕಾರವಾಗಿ ಇಂದು ಪ್ರಮುಖ ಆರೋಪಿಯೊಬ್ಬನನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ಈ ಕೊಲೆ ನಡೆದಿದೆ.
ಪುತ್ತೂರು ತಾಲೂಕು ಅರ್ಯಾಪು ನಿವಾಸಿ ಚರಣ್ (28) ಎಂಬಾತ ಕೊಲೆಗೀಡಾದವ. ಈತ ಹಿಂದೂ ಜಾಗರಣ ವೇದಿಕೆಯ ಕಾರ್ತಿಕ್​ ಮೇರ್ಲ ಎಂಬಾತನನ್ನು ಕೊಲೆಗೈದ ಪ್ರಮುಖ ಆರೋಪಿಯಾಗಿದ್ದ. 2019ರ ಸೆ. 4ರಂದು ಗಣೇಶೋತ್ಸವದ ಪೆಂಡಾಲ್​ನಲ್ಲಿ ಕಾರ್ತಿಕ್​ನನ್ನು ಕೊಲೆ ಮಾಡಲಾಗಿತ್ತು.
ಕಾರ್ತಿಕ್ ಕೊಲೆಗೆ ಸಂಬಂಧಿಸಿದಂತೆ ಸಹೋದರರಾದ ಕಿರಣ್, ಚರಣ್ ಹಾಗೂ ಪ್ರಿತೇಶ್ ಎಂಬ ಮತ್ತೊಬ್ಬಾತನನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಚರಣ್ ಪೆರ್ಲಂಪಾಡಿಯಲ್ಲಿ ಮೆಡಿಕಲ್ ಶಾಪ್ ಆರಂಭಿಸಲು ಸಜ್ಜಾಗಿದ್ದ.
ಭಾನುವಾರ ಅದರ ಶುಭಾರಂಭ ನಡೆಯಲಿದ್ದ ಹಿನ್ನೆಲೆಯಲ್ಲಿ ಶನಿವಾರ ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸುವ ಕಾರ್ಯದಲ್ಲಿ ಚರಣ್ ನಿರತರಾಗಿದ್ದ. ಸಂಜೆ ವೇಳೆಗೆ ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲ್ವಾರ್‌ನಿಂದ ಚರಣ್ ಮೇಲೆ ದಾಳಿ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಕಾರ್ತಿಕ್ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೆಂಡತಿಯ ಅಜ್ಜಿಯ ಮೇಲೇ ಅತ್ಯಾಚಾರ ಮಾಡಿದ 60 ವರ್ಷದ ಕಾಮುಕ; ಆರೋಪಿಯ ಬಂಧನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 14 =
Remember me
