ಕಡೂರು: ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿಚಾರವಾಗಿ ಮಗ ತಂದೆಯನ್ನೇ ಹತ್ಯೆ ಮಾಡಿದ್ದು, ಅಜ್ಜನ ಸಾವಿನಿಂದ ಬೇಸರಗೊಂಡ ಮೊಮ್ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗೋವಿಂದಪುರ ಗ್ರಾಮದ ನೀಲಪ್ಪ (75) ಮತ್ತು ಹೇಮಾ (19) ಮೃತ ದುರ್ದೈವಿಗಳು. ಜಮೀನಿನ ವ್ಯಾಜ್ಯ ಕೋರ್ಟ್‌ನಲ್ಲಿದ್ದು, ಬುಧವಾರ ರಾತ್ರಿ ತೋಟದ ಮನೆಯಲ್ಲಿ ಗಲಾಟೆ ನಡೆದಿದೆ. ಹಿರಿಯ ಮಗ ಲಕ್ಷ್ಮಣ ಹಾಗೂ ಆತನ ಪತ್ನಿ ರತ್ನಮ್ಮ ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿತಂದೆಯನ್ನೇ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​!
ಗುರುವಾರ ಬೆಳಗ್ಗೆ ಕಡೂರು ಪೊಲೀಸರು ನೀಲಪ್ಪ ಅವರ ಶವ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ತಂದ ಕೆಲವೇ ಗಂಟೆಯಲ್ಲಿ ಅವರ ಎರಡನೇ ಮಗ ಪ್ರಭಾಕರ ಎಂಬುವವರ ಮಗಳು ಹೇಮಾ ಗ್ರಾಮದ ಬಾವಿಗೆ ಹಾರಿದ್ದಾಳೆ.
ತನ್ನ ಗಂಡನನ್ನು ಮಗ ಮತ್ತು ಸೊಸೆ ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ಮೃತನ ಪತ್ನಿ ತಿಮ್ಮಮ್ಮ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿನಾಲ್ಕು ದಿನ ಕಾಡೆಲ್ಲ ಅಲೆದು ಮಾವೋವಾದಿಗಳ ವಶದಲ್ಲಿದ್ದ ಗಂಡನನ್ನು ಬಿಡಿಸಿಕೊಂಡು ಬಂದ ಮಹಿಳೆ!
ಹಣ್ಣು, ತರಕಾರಿ ಬೆಳೆಗಾರರಿಗೆ ತಲಾ 15 ಸಾವಿರ ರೂ.; ಮತ್ತೆ 162 ಕೋಟಿ ಪ್ಯಾಕೇಜ್ ನೀಡಿದ ಬಿಎಸ್‌ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
