ಬೆಂಗಳೂರು:ಕಳೆದ ಮೂರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ಕನ್ನಡ ಚಿತ್ರರಂಗದ ನಟ ದರ್ಶನ್​, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿದ್ದು, ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳೊಂದಿಗೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಇನ್ನು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ, ಕೊಲೆ ಪ್ರಕರಣಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಬೆಚ್ಚಿಬೀಳಿಸೋ ಮಾಹಿತಿ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ:ಈತ ಜಸ್ಪ್ರಿತ್ ಬುಮ್ರಾ ಇದ್ದಂತೆ, ಟೆಸ್ಟ್​ ಕ್ರಿಕೆಟ್​ ಆಡಲು ಅರ್ಹ: ಯುವ ಬೌಲರ್​ ಬಗ್ಗೆ ಸುನಿಲ್​ ಗವಾಸ್ಕರ್ ಮೆಚ್ಚುಗೆ
“ರೇಣುಕಾಸ್ವಾಮಿ ನನಗೆ ಆಶ್ಲೀಲ ಸಂದೇಶ ಮತ್ತು ಫೋಟೋ ಕಳುಹಿಸಿದ್ದನ್ನು ಕಂಡು ನಾನು ಪವನ್​ಗೆ (ಪವಿತ್ರಾ ಮನೆ ಕೆಲಸದವನು) ತೋರಿಸಿದೆ. ಈತ ಯಾರು? ಇವನ ಮೂಲವೇನು ಎಂಬುದನ್ನು ಹುಡುಕು. ಆದರೆ, ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್ ಕಿವಿಗೆ ಬೀಳುವುದು ಬೇಡ. ಬಿದ್ದರೆ ಏನಾದ್ರೂ ಅನಾಹುತ ಆಗಬಹುದು ಎಂದು ಹೇಳಿದ್ದೆ” ಎಂದು ತಿಳಿಸಿದ್ದಾಳೆ.
“ದರ್ಶನ್​ಗೆ ಈ ವಿಚಾರ ಗೊತ್ತಾಗಬಾರದು ಎಂದಿದ್ದೆ. ಆದರೆ, ಅವರು ಕೊಲೆ ಮಾಡುತ್ತಾರೆ ಎಂಬ ಸಣ್ಣ ಕಲ್ಪನೆಯೂ ಸಹ ನನಗೆ ಇರಲಿಲ್ಲ. ಹತ್ಯೆ ಮಾಡುತ್ತಾರೆ ಅಂದಿದ್ದರೆ, ನಾನೇ ಕಂಪ್ಲೆಂಟ್ ಕೊಟ್ಟು ಸರಿಮಾಡಿಕೊಳ್ಳುತ್ತಿದ್ದೆ” ಎಂದು ಆರೋಪಿ ಪವಿತ್ರಾ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಸಿನಿಮಾ ಒಟಿಟಿಗಿಲ್ಲ! ‘ಆಡುಜೀವಿತಂ’ ಡಿಜಿಟಲ್ ಹಕ್ಕುಗಳಿಗಿಲ್ಲವಾಯಿತೇ ಬೇಡಿಕೆ? ಹೀಗಿದೆ ವರದಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 − seven =
Remember me
