ಚಾಮರಾಜನಗರ:ಗಂಧದ ಮರ ಕದಿಯಲು ಬಂದ ಕಳ್ಳರು ಸಮೀಪದಲ್ಲೇ ಮಲಗಿದ್ದ ಮನೆಯ ಮಾಲೀಕನನ್ನು ಹೊತ್ತೊಯ್ದು ಕೊಲೆ ಮಾಡಿದ್ದಾರೆ.
ಚಂದಕವಾಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ದುಷ್ಕರ್ಮಿಗಳ ಕೃತ್ಯಕ್ಕೆ 80 ವರ್ಷದ ಶಿವಬಸಪ್ಪ ಬಲಿಯಾಗಿದ್ದಾರೆ. ಶಿವಬಸಪ್ಪ ಅವರ ಮನೆ ಆವರಣದಲ್ಲಿ ಶ್ರೀಗಂಧದ ಮರ ಇದೆ. ಇದನ್ನು ಕಾಯುತ್ತ ಮನೆ ಮುಂದೆ ವೃದ್ಧ ಮಲಗಿದ್ದರು. ಶ್ರೀಗಂಧ ಮರ ಕಳವಿಗೆ ಬಂದ ಕಳ್ಳರು ಮೊದಲಿಗೆ ಮನೆಯೊಳಗಿದ್ದವರು ಹೊರಬಾರದಂತೆ ಬಾಗಿಲ ಚಿಲಕ ಹಾಕಿ ವೃದ್ಧನನ್ನು ಹೊತ್ತೊಯ್ದಿದ್ದಾರೆ.
ಮನೆಯ ಅನತಿ ದೂರದಲ್ಲಿ ಶಿವಬಸಪ್ಪರ ಶವ ಪತ್ತೆಯಾಗಿದೆ. ಕೈ ಕಾಲು ಕಟ್ಟಿ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ‌ ಮಾಡಲಾಗಿದೆ. ಹತ್ಯೆ ಬಳಿಕ ಗಂಧದ ಮರ ಕತ್ತರಿಸಲು ಪ್ರಯತ್ನ ನಡೆದಿದೆ. ಶಬ್ದ ಕೇಳಿ ಬಾಗಿಲು ಮುರಿದು ಮನೆಯವರು ಹೊರಬರುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್ ಭೇಟಿ‌ ನೀಡಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆದಿದೆ. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

ನದಿ ದಂಡೆಯಲ್ಲಿ ಊಟ ಮಾಡುವವರೆಗೂ ಕಾದ ಜವರಾಯ… ನೋಡನೋಡುತ್ತಿದ್ದಂತೆ ಇಬ್ಬರ ಪ್ರಾಣ ಹೊತ್ತೊಯ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
