ಮಂಡ್ಯ:ಯುವತಿಯನ್ನು ಕೊಲೆಗೈದು ತಲೆ, ಕೈ, ಕಾಲು ಸೇರಿದಂತೆ ಅಂಗಾಂಗಗಳನ್ನು ಮನಸೋಇಚ್ಛೆ ತುಂಡರಿಸಿ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ನದಿಯ ನಾಲೆಗೆ ದುಷ್ಕರ್ಮಿಗಳು ಎಸೆದಿರುವ ತಡವಾಗಿ ಬೆಳಕಿಗೆ ಬಂದಿದ್ದು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೇಹದ ಅಂಗಾಂಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಂದಾಜು 25 ವರ್ಷ ವಯಸ್ಸಿನ ಅಪರಿಚಿತ ಯುವತಿಯ ದೇಹ ಮಂಗಳವಾರ ನಾಲೆಯ ಗೇಟಿನಲ್ಲಿ ಕಂಡುಬಂದಿದೆ. ಈ ವಿಷಯವನ್ನು ನೌಕರರು ಗ್ರಾಮಾಂತರ ಠಾಣೆ ಎಸ್​ಐ ಸುರೇಶ್​ ಅವರಿಗೆ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಶವವನ್ನು ಮೇಲೆತ್ತಿದಾಗ ತಲೆ ಮತ್ತು ಕೈ-ಕಾಲುಗಳನ್ನು ತುಂಡರಿಸಲಾಗಿದ್ದ, ಯುವತಿಯ ಮೃತದೇಹ ಸಿಕ್ಕಿದೆ. ನಂತರ ನಾಲೆಯಲ್ಲಿ ಹುಡುಕಾಟ ನಡೆಸಿದ್ದು, ಬುಧವಾರ ತಲೆ, ಕೈ ಮತ್ತು ಕಾಲು ಸಿಕ್ಕಿವೆ. ಕಾಲು, ಕೈಗಳನ್ನೂ ಎರಡು ಭಾಗವಾಗಿ ತುಂಡರಿಸಲಾಗಿದೆ.
ಮೃತಳ ಕೈ ಮೇಲೆ ಮೀನಿನ ಚಿತ್ರದ ಹಚ್ಚೆ ಇರುವುದರಿಂದ, ಈಕೆ ಮಿನುಗಾರರ ಕುಟುಂಬಕ್ಕೆ ಸೇರಿರಬಹುದೆಂದು ಶಂಕಿಸಲಾಗಿದೆ. ಮೀನು ಕತ್ತರಿಸುವ ಅಸಗಳಿಂದಲೇ ಈಕೆಯ ದೇಹವನ್ನು ತುಂಡರಿಸಲಾಗಿದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹೇಮಗಿರಿ ಬಳಿ ಟೆಂಟ್​ನಲ್ಲಿ ವಾಸವಾಗಿರುವ ಮೀನುಗಾರರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಮೃತ ಯುವತಿ ಅಲ್ಲಿನ ಯಾವುದೇ ಕುಟುಂಬಕ್ಕೆ ಸೇರಿದವಳಲ್ಲ ಎಂಬುದು ತಿಳಿದಿದೆ. ವಿಶೇಷವೆಂದರೆ, ಇಲ್ಲಿನ ಮಹಿಳೆಯರ ಕೈ ಮೇಲೂ ಮೀನಿನ ಚಿತ್ರದ ಹಚ್ಚೆ ಇದೆ.
ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಾರಸುದಾರರಿದ್ದರೆ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ. ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 15 =
Remember me
