ಬೆಂಗಳೂರು:ಕಾಮಾಕ್ಷಿಪಾಳ್ಯದ ರಂಗನಾಥಪುರದ ಮನೆಯಲ್ಲಿ ವೃದ್ಧ ದಂಪತಿ ಮಲಗಿದ್ದಲ್ಲೇ ಕೊಲೆಯಾಗಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಮೈಸೂರು ಮೂಲದ ನರಸಿಂಹರಾಜು(65) ಮತ್ತು ಸರಸ್ವತಿ(64) ಕೊಲೆಯಾದ ದಂಪತಿ. ಕಳೆದ 3 ವರ್ಷದಿಂದ ರಂಗನಾಥಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಓರ್ವ ಪುತ್ರನ ಜತೆ ವಾಸವಿದ್ದರು.
ಇದನ್ನೂ ಓದಿರಿದುರಂತ ಅಂತ್ಯಕಂಡ ಕ್ಯಾನ್ಸರ್​ ರೋಗಿ… ತಾನೇ ಸಿದ್ಧಪಡಿಸಿದ ಚಿತೆಗೆ ಹಾರಿ ಪ್ರಾಣಬಿಟ್ಟರು!
ಮಂಗಳವಾರ ರಾತ್ರಿ ಮಲಗಿದ್ದಾಗ ವೃದ್ಧ ದಂಪತಿಯ ಬಾಯಿಗೆ ಬಟ್ಟೆ ಇಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಇಂದು(ಬುಧವಾರ) ಬೆಳಗ್ಗೆ ಮನೆಗೆಲಸದಾಕೆ ಬಾಗಿಲು ಬಡಿದಾಗ ತೆರೆದಿಲ್ಲ. ಬಳಿಕ ‘ನಮ್ಮ 100’ಗೆ ಕರೆ ಮಾಡಿ ದೂರು ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ಇದನ್ನೂ ಓದಿರಿಇದು ಟ್ರೈಂಗಲ್ ಲವ್ ಸ್ಟೋರಿ… ಬ್ರೇಕ್​ ಅಪ್​ ಬಳಿಕ ಎಂಟ್ರಿಕೊಟ್ಟ ಮಾಜಿ ಪ್ರಿಯಕರ ಕಿರಿಕ್​ ಪ್ರೇಯಸಿಗೆ ಹೀಗಾ ಮಾಡೋದು?
ಮೃತರ ಪುತ್ರ ಸಂತೋಷ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಮೇಲೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ. ಕೌಟುಂಬಿಕ ಕಲಹದ ವಿಚಾರವಾಗಿ 2 ದಿನಗಳ ಹಿಂದೆ ಮನೆಯಲ್ಲಿ ಮಗನ ಜತೆ ವೃದ್ಧ ದಂಪತಿಗೆ ಜಗಳವಾಗಿತ್ತು ಎನ್ನಲಾಗಿದೆ. ಶ್ವಾನದಳ, ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದೆ.
ಇದನ್ನೂ ಓದಿರಿಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 5 =
Remember me
