ವೆಂಕಟೇಶ ಎ. ಜಂಬಗಿ. ಅಧ್ಯಕ್ಷರುಪ್ರಣಮ್ಯ ಎಜ್ಯುಕೇಶನ್ ಫೌಂಡೇಶನ್ ಹಾಗೂ ಅಥರ್ವ ಸ್ಕೂಲ್ಸ್ ನಾಗನೂರ.
ಮುರುಗೇಶ ನಿರಾಣಿ ಕರ್ನಾಟಕದ ಅತ್ಯಂತ ಚಿರಪರಿಚಿತ ಹೆಸರು. ಸಾಂಪ್ರದಾಯಿಕ ರಾಜಕಾರಣಿಗಳಿಗಿಂತ ವಿಭಿನ್ನವಾಗಿ ಕಾಣುವ ವ್ಯಕ್ತಿತ್ವ ನಿರಾಣಿಯವರದ್ದು. ಒಬ್ಬ ಪ್ರಜ್ಞಾವಂತ ದೇಶದ ಪ್ರಜೆ ಒಬ್ಬ ರಾಜಕಾರಣಿಯಲ್ಲಿ ಬಯಸುವ ಎಲ್ಲ ಅರ್ಹತೆಗಳು ಅವರಲ್ಲಿವೆ. ವಿದ್ಯಾವಂತ ತಾಂತ್ರಿಕ ಪದವೀಧರ. ಯಶಸ್ವಿ ಉದ್ಯಮಿ, ಕೃಷಿ ಕುಟುಂಬದ ಹಿನ್ನೆಲೆ ಇರುವುದರಿಂದ ಎಲ್ಲ ವರ್ಗದವರ ನಾಡಿಮಿಡಿತ ಅವರಿಗೆ ಗೊತ್ತಿದೆ. ಯುವ ಸಮುದಾಯದ ಅವಶ್ಯಕತೆಗಳು, ಕೃಷಿ ರಂಗದ ಕಷ್ಟ-ನಷ್ಟಗಳು, ನೀರಾವರಿ ಯೋಜನೆಗಳ ಅನುಷ್ಠಾನದ ಮಹತ್ವ ಎಲ್ಲವನ್ನು ಬಲ್ಲವರಾಗಿದ್ದಾರೆ. ಹೀಗಾಗಿ ಮುರುಗೇಶ ನಿರಾಣಿಯವರು ಉದ್ಯಮಿಯಾಗಿ, ರಾಜಕಾರಣಿಯಾಗಿ ಯಶಸ್ವಿಯಾಗಿದ್ದಾರೆ.
ಶೂನ್ಯದಿಂದ ಎತ್ತರಕ್ಕೆ ಬೆಳೆದ ಪ್ರತಿ ವ್ಯಕ್ತಿಯ ಜೀವನ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತದೆ. ಮುಂಬರುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿರುತ್ತದೆ. ಅಂತಹದೇ ರೋಚಕ ಯಶೋಗಾಥೆ ಮುರುಗೇಶ ನಿರಾಣಿಯವರದ್ದು. ನಮ್ಮ ಯಶಸ್ಸು ಕೇವಲ ವ್ಯಕ್ತಿಗತವಾಗಿರದೇ ಅದು ಸಮಾಜದೊಂದಿಗೆ ಸಮಾಗಮವಾಗಿರಬೇಕು. ಆಗ ಮಾತ್ರ ಯಶಸ್ಸಿಗೊಂದು ಅರ್ಥ ಬರುತ್ತದೆ. ಮುರುಗೇಶ ನಿರಾಣಿಯವರ ಉದ್ಯಮದ ಒಟ್ಟು ಯಶಸ್ಸು ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಜೊತೆಗೆ ಸಾಗುತ್ತದೆ.

ಭಾರತ ಕೃಷಿ ಪ್ರಧಾನವಾದ ದೇಶ. ಈ ದೇಶದ ಶೇ.70ರಷ್ಟು ಕುಟುಂಬಗಳು ಉದ್ಯೋಗಕ್ಕೆ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉಪ ಉದ್ಯೋಗಗಳನ್ನು ಅವಲಂಭಿಸಿದೆ. ಹೀಗಾಗಿ ನಮ್ಮ ರೈತ ಬೆಳೆದ ಬೆಳೆಗೆ ಸದೃಢ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದೇ ಬಹುದೊಡ್ಡ ಕೆಲಸ. ಅಂತಹ ಮಹತ್ತರವಾದ ಜವಾಬ್ದಾರಿಯನ್ನು ಉತ್ತರ ಕರ್ನಾಟಕದಲ್ಲಿ ಮುರುಗೇಶ ನಿರಾಣಿಯವರು ತುಂಬ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಇದರಿಂದ ಕಬ್ಬಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ದೊರೆಯುವ ಜೊತೆಗೆ ವಿದ್ಯಾವಂತ ಯುವಕರಿಗೆ ಉದ್ಯೋಗಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾದವು.
ಉದ್ಯಮಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ರಾಜಕಾರಣಿಯಾಗಿಯೂ ಸೈ ಎನಿಸಿಕೊಂಡರು. ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ತಾಲೂಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬಾಧಿತಗೊಂಡ ಪ್ರದೇಶವಾದ ಬೀಳಗಿಗೆ ಅಭಿವೃದ್ದಿಯ ಸ್ಪರ್ಶ ನೀಡಿದರು.

ಬಾದಾಮಿ ತಾಲೂಕಿನ ಬರಡು ಭೂಮಿಗೆ ಹೆರಕಲ್ ನೀರಾವರಿ ಯೋಜನೆ ಮೂಲಕ ನೀರು ತಂದರು. ಇದೊಂದೇ ಯೋಜನೆ ಮೂಲಕ 45 ಸಾವಿರ ಎಕರೆ ಭೂಪ್ರದೇಶವನ್ನು ನೀರಾವರಿಗೆ ಒಳಪಡಿಸಲು ಸಾಧ್ಯವಾಯಿತು. ಮುಂದೆ ವಿವಿಧ ಯೋಜನೆಗಳ ಮೂಲಕ 1 ಲಕ್ಷಕ್ಕೂ ಅಧಿಕ ಎಕರೆ ಭೂಮಿಗೆ ನೀರು ನೀಡುವ ಕಾರ್ಯದಲ್ಲಿ ಪ್ರವೃತ್ತರಾಗಿ ಅನೇಕ ಯೋಜನೆಗಳನ್ನು ಬೀಳಗಿಗೆ ತಂದರು. ನೀರು ಬಂದ ಭೂಮಿಯಲ್ಲಿ ಕಬ್ಬು ಬೆಳೆದ ರೈತನ ಹೆಗಲಿಗೆ ಕೂಡ ಆಸರೆಯಾಗಿ ನಿಂತರು. ತಮ್ಮ ಸಮೂಹದ ವತಿಯಿಂದ ಎಂ.ಆರ್.ಎನ್. ಶುಗರ್ಸ್ ಕಾರ್ಖಾನೆಯನ್ನು ಕುಳಗೇರಿ ಕ್ರಾಸ್ ಬಳಿ ನಿರ್ಮಿಸಿದರು. ಜೊತೆಗೆ ಬಾದಾಮಿ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಕೇದಾರನಾಥ ಹಾಗೂ ಬಾದಾಮಿ ಶುಗರ್ಸ್ ಕಾರ್ಖಾನೆಗಳನ್ನು ತಮ್ಮ ವಶಕ್ಕೆ ಪಡೆದು ಪುನರ್ ಪ್ರಾರಂಭಿಸಿದರು. ಇದರಿಂದ ಬರಪಿಡಿತ ಪ್ರದೇಶದ ರೈತರಿಗೆ ನೀರು, ಅವರು ಬೆಳೆದ ಬೆಳೆಗೆ ಮಾರುಕಟ್ಟೆ ಜೊತೆಗೆ ಅವರ ಮಕ್ಕಳಿಗೆ ಉದ್ಯೋಗ ಎಲ್ಲವು ದೊರಕಿದಂತಾಯಿತು. ಇದುವೇ ನಿಜವಾದ ಗ್ರಾಮ ಸ್ವರಾಜ್ಯದ ಸಾಕಾರ. ಆತ್ಮ ನಿರ್ಭರ ಭಾರತಕ್ಕೆ ಮುನ್ನುಡಿ.
ಒಬ್ಬ ಸಂಪುಟದರ್ಜೆ ಸಚಿವರಾಗಿಯೂ ಮುರುಗೇಶ ನಿರಾಣಿ ಯಶಸ್ವಿಯಾಗಿದ್ದಾರೆ. 2008-13ರಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕ ಕೈಗಾರಿಕಾ ರಂಗಕ್ಕೆ ಹೊಸ ಭಾಷ್ಯ ಬರೆದರು. ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿದರು. ಹೊಸ ಉದ್ಯಮಿಗಳನ್ನು ಸ್ವಾಗತಿಸಿದರು. ಸ್ಥಳೀಯ ಉದ್ಯಮಿಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಯುವಕರಿಗೆ ಉದ್ಯೋಗ ಅರಸುವ ಬದಲು ಉದ್ಯಮಿಯಾಗು ಉದ್ಯೋಗ ನೀಡು ಎಂಬ ಕರೆ ನೀಡಿದರು. ವಲಯಾಧಾರಿತ ಕಾರ್ಖಾನೆಗೆ ಉತ್ತೇಜನ ನೀಡಿದರು.
2021ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ ನಿರಾಣಿ ಇಲಾಖೆಗೆ ಒಂದು ಹೊಸತನ ತುಂಬಿದರು. ನಿಸತ್ವವಾಗಿದ್ದ ಇಲಾಖೆಗೆ ಜೀವ ತುಂಬಿದರು. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. ಅದಿರು ರಫ್ತು ಹಾಗೂ ಆಮದಿನ ಮೇಲಿನ ನಿಷೇಧ ಹೆರಿಕೆ ತೆರವುಗೊಳಿಸಲು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಗಣಿ ಉದ್ಯಮಿಗಳಿಂದ ಸಂಗ್ರಹಿಸಿದ ಸುಂಕ ಮತ್ತು ದಂಡದ 21000 ಕೋಟಿಗೂ ಅಧಿಕ ಮೊತ್ತವನ್ನು ರಾಜ್ಯದ ಅಭಿವೃದ್ದಿಗೆ ಬಳಕೆ ಮಾಡಲು ಅನುಮತಿ ಪಡೆಯುವ ಪ್ರಯತ್ನ ನಡೆಸಿದರು. ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿ ಜ್ಯುವೆಲರಿ ಪಾರ್ಕ್, ರಾಜ್ಯ ಲಾಂಛನ ಇರುವ ಚಿನ್ನದ ನಾಣ್ಯ ಬಿಡುಗಡೆ, ಗಣಿ ವಿಶ್ವವಿದ್ಯಾಲಯ ಸ್ಥಾಪನೆಯಂತಹ ಹತ್ತು ಹಲವಾರು ಹೊಸ ಪರಿಕಲ್ಪನೆಗಳನ್ನು ಹೊತ್ತು ಕೆಲಸ ಮಾಡಿದ ಪರಿಣಾಮ ಇಡೀ ಇಲಾಖೆಗೆ ಒಂದು‌ ಮೆರಗು ಬಂತು. ಈಗ ಮತ್ತೆ ಕೈಗಾರಿಕಾ ಸಚಿವರಾಗಿ ಮತ್ತಷ್ಟು ಹೊಸ ಯೋಚನೆ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಕೇವಲ ಒಬ್ಬ ವ್ಯಕ್ತಿ ಎಲ್ಲಾ ರಂಗಗಳಲ್ಲಿಯೂ ಯಶಸ್ವಿಯಾಗುವುದರ ಜೊತೆಗೆ ಈ ಯಶಸ್ಸಿನ ಒಟ್ಟು ಪ್ರಯೋಜನವು ಸಮಾಜಕ್ಕೆ ಸಿಗುವುದಾದರೆ ಅವರನ್ನು ಕರುನಾಡಿನ ಆಶಾಕಿರಣ, ಅಭಿವೃದ್ದಿಯ ಹರಿಕಾರ ಎಂದರೆ ಖಂಡಿತ ಅತಿಶಯೋಕ್ತಿಯಾಗುವುದಿಲ್ಲ.
ಮುರುಗೇಶ ನಿರಾಣಿ ರಾತ್ರಿ ಕಳೆದು ಬೆಳಕು ಮೂಡುವಷ್ಟರಲ್ಲಿ ಉತ್ತುಂಗದ ಶಿಖರ ಏರಿದವರಲ್ಲ ಸುಮಾರು ಎರಡುವರೆ ದಶಕಗಳ ಕಠೀಣ ಶ್ರಮ, ಶ್ರದ್ದೆ, ತನ್ಮಯತೆ ಈ ಎತ್ತರಕ್ಕೆ ಬೆಳೆಸಿದೆ. ವತ ಉದ್ಯಮ ಹಾಗೂ ರಾಜಕಾರಣದ ಎರಡೂ ಗ್ರಾಫ್ ಗಳು ಸಾಕಷ್ಟು ಏರಿಳಿತದಿಂದ ಕೂಡಿವೆ. ಎಲ್ಲವನ್ನು ಸಮಚಿತ್ತದಿಂದ ಎದುರಿಸಿದರು. ಗೆಲುವು ಸೋಲುಗಳನ್ನು ಸಮಾನವಾಗಿ ಸ್ವೀಕರಿಸಿದರು. ಇದಕ್ಕೆ ಕಾರಣ ಸಮಾಜಕ್ಕೆ ಒಳಿತಾಗುವ ಕಾರ್ಯವಿದ್ದರೆ ತಕ್ಷಣ ಕಾರ್ಯೋನ್ಮುಖರಾಗುತ್ತಾರೆ. ಮನೆಯಲ್ಲಿ ಸಹೋದರರು, ಮಕ್ಕಳು, ಕಾರ್ಖಾನೆ ಸಿಬ್ಬಂದಿ, ಗೆಳೆಯರು ಎಲ್ಲರನ್ನು ಸಮಾನ ಭಾವದಿಂದ ನೋಡುವುದರಿಂದ ಅವರೆಂದರೆ ಎಲ್ಲರಿಗೂ ಗೌರವ, ಅಭಿಮಾನ ತಾನಾಗಿಯೇ ಮೂಡುತ್ತದೆ. ಇಷ್ಟು ಎತ್ತರಕ್ಕೆ ಬೆಳೆದರೂ ಎಂದಿಗೂ ಅಹಂಮಿಕೆ ಅವರಲ್ಲಿ ಬರಲಿಲ್ಲ. ಹೀಗಾಗಿ ಅವರ ಸಮೀಪಕ್ಕೆ ಬರುವ ಪ್ರತಿಯೊಬ್ಬರಿಗೂ “ಮುರುಗೇಶ ನಿರಾಣಿ ಎಂದರೆ ವೆರಿ ಡೌನ್ ಟು ಅರ್ತ್”
ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುವ ಪ್ರತಿ ಕೆಲಸದಲ್ಲಿಯೂ ಸಮಾಜದ ಹಿತ ಬಯಸುವ ಅವರು ಹಿಡಿದ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತಾರೆ. ಹಿಡಿದ ದಾರಿ ಸರಿಯಿದ್ದರೆ, ಸಂಕಲ್ಪಿಸಿಕೊಂಡ ಉದ್ದೇಶ ಒಳ್ಳೆಯದಾಗಿದ್ದರೆ, ಬಂದ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದರೆ ಭಗವಂತನೇ ಮುಂದೆ ನಿಂತು ಅವಕಾಶಗಳನ್ನು ಸೃಷ್ಟಿಸಿ ನಮ್ಮನ್ನು ಗೆಲ್ಲಿಸುತ್ತಾನೆ ಎಂದು ಅವರು ಸದಾ ಹೇಳುತ್ತಿರುತ್ತಾರೆ. ಹೀಗಾಗಿ ಅವರನ್ನು ಬಲ್ಲವರು ಹೇಳುವುದು “ಮುರುಗೇಶ ನಿರಾಣಿ ಮುಟ್ಟಿದ್ದೆಲ್ಲ ಚಿನ್ನ”
ಸಕ್ಕರೆ ಇಥೆನಾಲ್ ಕ್ಷೇತ್ರದಲ್ಲೆ ದೇಶದಲ್ಲಿ ಅಗ್ರಗಣ್ಯ ಸಂಸ್ಥೆ ಕಟ್ಟುವುದಲ್ಲದೇ ಇಥೆನಾಲ್ ಸಿ.ಎನ್.ಜಿ ಕ್ಷೇತ್ರದಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಗೆ ಸ್ಪಂದಿಸಿ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 58 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮುರುಗೇಶ ನಿರಾಣಿಯವರು ಪ್ರತಿದಿನ, ಪ್ರತಿಕ್ಷಣ ಹೊಸದನ್ನು ಬಯಸುವ ಸೃಜನಶೀಲ ಉದ್ಯಮಿ, ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಅವರ ಅರ್ಹತೆಗೆ ಮತ್ತಷ್ಟು ಉನ್ನತ ಸ್ಥಾನಮಾನಗಳು ದೊರೆಯಲಿ, ನಮ್ಮಂತಹ ಅಸಂಖ್ಯ ಯುವಕರಿಗೆ ಪ್ರೇರಣಾಶಕ್ತಿಯಾದ ಅವರ ಸೇವೆ ದಿರ್ಘಕಾಲದವರೆಗೂ ನಾಡಿಗೆ ದೊರೆಯಲಿ ಎಂದು ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಹಾರೈಸುತ್ತೇವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 5 =
Remember me
