ಬೆಂಗಳೂರು:ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಕರ್ನಾಟಕ ಹೈಕೋರ್ಟ್​ ಬುಧವಾರ (ನ.08) ಷರತ್ತುಬದ್ಧ ಜಾಮೀನು ನೀಡಿದೆ.
ಶಿವಮೂರ್ತಿ ಶರಣರಿಗೆ ಕೆಲವು ಷರತ್ತುಗಳು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ. ಷರತ್ತಿನ ಪ್ರಕಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಶ್ರೀಗಳಿಗೆ ಪ್ರವೇಶವಿಲ್ಲ, ಪಾಸ್​ಪೋರ್ಟ್​ ಅನ್ನು ಕೋರ್ಟ್​ ವಶಕ್ಕೆ ನೀಡಬೇಕು, ಇಬ್ಬರ ಶ್ಯೂರಿಟಿ ಒದಗಿಸಬೇಕು, ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಬೇಕು ಮತ್ತು ಇಂತಹ ಕೃತ್ಯಗಳನ್ನು ಪುನಾರಾವರ್ತನೆ ಮಾಡುವಂತಿಲ್ಲ ಎಂದು ಕೋರ್ಟ್​ ಸೂಚನೆ ನೀಡಿದೆ.
ಬಿಡುಗಡೆ ಭಾಗ್ಯ ಇಲ್ಲಮುರುಘಾ ಶ್ರೀಗಳಿಗೆ ಜಾಮೀನು ಸಿಕ್ಕಿದ್ದರೂ ಸದ್ಯಕ್ಕೆ ಬಿಡುಗಡೆಯ ಭಾಗ್ಯವಿಲ್ಲ. ಏಕೆಂದರೆ, ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ದೊರೆತಿದ್ದು, ಇನ್ನು ಒಂದು ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಶ್ರೀಗಳಿಗೆ ಬಿಡುಗಡೆ ಭಾಗ್ಯ ಲಭಿಸುವುದಿಲ್ಲ ಎಂದು ಹೇಳಲಾಗಿದೆ.
ಪ್ರಕರಣವೇನು?ಚಿತ್ರದುರ್ಗ ಮಠದ ವಸತಿ ಶಾಲೆಯ ಬಾಲಕಿಯರಿಬ್ಬರು ಆಗಸ್ಟ್ 26ರಂದು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ತೆರಳಿ ಶರಣರ ವಿರುದ್ಧ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಎದುರು ಸಂತ್ರಸ್ತ ಬಾಲಕಿಯರನ್ನು ಹಾಜರುಪಡಿಸಿ ಹೇಳಿಕೆ ಪಡೆದ ಬಳಿಕ ಶರಣರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಪ್ರಕರಣವನ್ನು ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ವಾಮೀಜಿ, ವಾರ್ಡನ್, ಕಾರ್ಯದರ್ಶಿ, ವಕೀಲ, ಮಠದ ಉತ್ತರಾಧಿಕಾರಿ ಸೇರಿ ಐವರ ವಿರುದ್ಧ ಆರೋಪ ಮಾಡಲಾಗಿತ್ತು. ಬಳಿಕ ಪೊಕ್ಸೊ ಪ್ರಕರಣದ ಅಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು.
ಒಡನಾಡಿ ಸಂಸ್ಥೆ ಅಸಮಾಧಾನಮುರುಘಾ ಶ್ರೀಗಳಿಗೆ ಜಾಮೀನು ವಿಚಾರವಾಗಿ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ವಕೀಲರ ಜೊತೆ ಚರ್ಚೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ಈ ಪ್ರಕರಣದಲ್ಲಿ ಕೆಲವು ಲೋಪದೋಷಗಳ ಕಾಣುತ್ತಿವೆ. ಪೊಲೀಸರ ಚಾರ್ಜ್​ಶೀಟ್ ಸಲ್ಲಿಸುವ ವೇಳೆ ಲೋಪವಾಗಿದೆ. ಹೀಗಾಗಿ ಜಾಮೀನು ಸಿಕ್ಕಿದೆ. ಜೈಲಿನಲ್ಲಿದುಕೊಂಡೇ ಸ್ವಾಮೀಜಿಗಳು ಪ್ರಭಾವ ಬೀರಿದ್ದಾರೆ. ಚಿತ್ರದುರ್ಗಕ್ಕೆ ಹೋಗಬಾರದು ಎಂದು ನ್ಯಾಯಾಲಯ ಹೇಳಿರುವುದು ಸ್ವಾಗತಾರ್ಹ. ಈ ಪ್ರಕರಣದಲ್ಲಿ ಚಿಕ್ಕ ಮಕ್ಕಳು ಸಾಕಷ್ಟು ನೊಂದಿದ್ದು, ನಾವು ಅವರ ಪರವಾಗಿ ನಾವಿದ್ದೇವೆ. ಮುರಘಾ ಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗೇ ಆಗುತ್ತದೆ ಎಂದಿದ್ದಾರೆ.
4 ಗಂಟೆ ಕಳೆಯುವಷ್ಟರಲ್ಲಿ ಆ ರೈತನಾದ ಕೋಟ್ಯಧಿಪತಿ – ಯಾವ ಜಾಕ್​ಪಾಟ್​ ಹೊಡೀತು?

ಪತ್ನಿ ನೀತಾ ಅಂಬಾನಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದುಬಾರಿ ಬೆಲೆಯ ಕಾರು ಗಿಫ್ಟ್​​ ಮಾಡಿದ ಮುಕೇಶ್ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + two =
Remember me
