ಬೆಂಗಳೂರುರಾಜ್ಯದ ಕಾಂಗ್ರೆಸ್ ಸರ್ಕಾರವು ಪ್ರತಿ ಹಂತದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ತುಷ್ಟೀಕರಣ ಮಾಡುತ್ತಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಸಿಕ್ಕಲೆಲ್ಲಾ ತನ್ಮ ಸಿದ್ಧಾಂತವನ್ನು ತುರುಕುವ ಮತ್ತು ಮುಗ್ಧ ಮಕ್ಕಳ ಮೇಲೆ ಬಲವಂತವಾಗಿ ಹೇರುವ ಪ್ರಯತ್ನವಾಗುತ್ತಿದೆ ಎಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಒಂದು ಸರ್ಕಾರ ನೇರಾನೇರ ಒಂದು ಪಂಗಡದವರ ಪರವಾಗಿ ಓಲೈಕೆಗೆ ನಿಂತುಬಿಟ್ಟರೆ ಎಷ್ಟೆಲ್ಲ ಅಧ್ವಾನಗಳಾಗಬಹುದು ಎಂಬುದಕ್ಕೆ ಕಾಂಗ್ರೆಸ್ ಸರ್ಕಾರವು ಉದಾಹರಣೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆ ಎನ್ನುವುದು ರಾಜಕೀಯದಲ್ಲಿ ಮಾತ್ರ ಅಲ್ಲದೇ ಹಿಂದುಗಳ ಧಾರ್ಮಿಕ ಭಾವನೆ, ಶಿಕ್ಷಣ, ಅನುದಾನ ಹೀಗೆ ಅನೇಕ ವಿಭಾಗಗಳಲ್ಲಿ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 8 ತಿಂಗಳಲ್ಲಿ ಈ ದಿಸೆಯಲ್ಲಿ ಆದ ಪ್ರಯತ್ನಗಳೇನು ಒಂದೆರಡಲ್ಲ ಎಂಬ ಅಸಮಾಧಾನ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಶಾಲೆಗಳಲ್ಲಿ ಸರಸ್ವತಿ ಪೂಜೆ ನಿಲ್ಲಿಸುವ ಪ್ರಯತ್ನವಾಯಿತು, ಕೈಮುಗಿದು ಒಳಗೆ ಬನ್ನಿ ಎಂಬ ಘೋಷ ವಾಕ್ಯ ಬದಲಾವಣೆಯ ಪ್ರಯತ್ನವಾಯಿತು. ಶಾಲೆಯ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಸೇರಿಸಲೂ ವಿರೋಧ ಮಾಡಿದರು ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.
ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ೆ.24ರಂದು ನಡೆದ ಮೊದಲ ಪಿಯುಸಿ ಇತಿಹಾಸ ವಾರ್ಷಿಕ ಪರೀಕ್ಷೆಯಲ್ಲಿ ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮ ಬೋಧನೆಗಳ ಕುರಿತಾದ ಪ್ರಶ್ನೆಗಳಿವೆ. ಆದರೆ, ಸನಾತನ ಹಿಂದೂ ಧರ್ಮದ ಕುರಿತಾಗಲೀ, ಅದರ ಹಿರಿಮೆ, ಗರಿಮೆಗಳ ಕುರಿತಾಗಲೀ, ನಮ್ಮ ಆಚರಣೆಗಳಲ್ಲಿರುವ ವೈಜ್ಞಾನಿಕತೆಗಳ ಕುರಿತಾಗಲೀ ಒಂದೇ ಒಂದು ಅಂಕದ ಪ್ರಶ್ನೆಗಳೂ ಇಲ್ಲ. ’ತಾರತಮ್ಯ’ ’ಓಲೈಕೆ’ ಎನ್ನುವ ಶಬ್ದಗಳಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
