ಕಾರ್ಗಲ್​ (ಶಿವಮೊಗ್ಗ):ಪಟ್ಟಣದ ಜೋಗ ರಸ್ತೆಯ ತಳಕಳಲೆ ವೃತ್ತದಲ್ಲಿ ಹಿಂದುಗಳು ಪೂಜಿಸಿಕೊಂಡು ಬರುತ್ತಿರುವ ಭೂತಪ್ಪನ ಗುಡಿಗೆ ಮೊಹಿದ್ದೀನ್​ ತವಕ್ಕಲ್​ ಕುಟುಂಬ 25*35 ಅಡಿ ನಿವೇಶನ ದಾನ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದೆ.
ತವಕ್ಕಲ್​ ಕುಟುಂಬದ ಎರಡನೇ ತಲೆಮಾರಿನ ಹಸನ್​ ಹಾಗೂ ಖಾದರ್​ ಮತ್ತು ಮೂರನೇ ತಲೆಮಾರಿನ ಯುವಕರಾದ ಕರೀಂ, ರಫೀಕ್​ ಅವರು ಬಸಪ್ಪನ ಮಗ ಉಮೇಶ್​, ಲಕ್ಷ್ಮಣನ ಮಗ ಗೋವಿಂದ ಹಾಗೂ ರಾಮಣ್ಣನ ಮಗ ರವಿಚಂದ್ರ ಅವರ ಹೆಸರಿಗೆ ಮಾಡಿದ ದಾನಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಸಂತೋಷ್​ಕುಮಾರ್​, ಎಚ್​.ಎಸ್​.ಸಾದಿಕ್​ ಉಪಸ್ಥಿತರಿದ್ದರು.ಇದನ್ನೂ ಓದಿರಿ‘ಬಿಜೆಪಿಯಲ್ಲಿ ಯಡಿಯೂರಪ್ಪಗೆ ಮತ್ತೊಬ್ಬ ಪ್ರತಿಸ್ಪರ್ಧಿಯೇ ಇಲ್ಲ’
ಕುಂಜಿ ಮೊಹಿದ್ದೀನ್​ ಅವರ ತವಕ್ಕಲ್​ ಕುಟುಂಬ ಸುಮಾರು 75 ವರ್ಷಗಳಿಂದ ಪಾರಂಪರಾಗತವಾಗಿ ಅನುಭವಿಸಿಕೊಂಡು ಬಂದ ಒಟ್ಟು ಆಸ್ತಿ ಇದು. ಅವರ ಮಕ್ಕಳು, ಮೊಮ್ಮಕ್ಕಳು ಇಲ್ಲೇ ನೆಲೆಸಿದ್ದಾರೆ. ಅಂದು ಇದೇ ಆಸುಪಾಸಿನಲ್ಲಿ ವಾಸವಿದ್ದ ರಾಮಣ್ಣ, ಬಸಪ್ಪ ಹಾಗೂ ಲಕ್ಷ್ಮಣ ಈ ಮೂವರು ಕುಟುಂಬಸ್ಥರು ಇದೇ ಜಾಗದಲ್ಲಿ ಭೂತಪ್ಪ ದೇವರ ಇರುವಿಕೆಯನ್ನು ದೈವಿ ಪ್ರಶ್ನೆಯಲ್ಲಿ ಕಂಡುಕೊಂಡು ಆಲದಮರ, ಅರಳಿಮರ ಹಾಗೂ ಬಸುರಿ ಮರವನ್ನು ನೆಟ್ಟು ಭೂತಪ್ಪನ ಕಲ್ಲಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಅವರ ಕಾಲ ನಂತರ ಅವರ ಮಕ್ಕಳು ಪೂಜಿಸಿಕೊಂಡು ಬರುತ್ತಿದ್ದರು.
5 ವರ್ಷಗಳ ಹಿಂದೆ ಮಳೆಗಾಳಿಗೆ ದೈವತ್ವದ ಸ್ವರೂಪ ಹೊಂದಿದ್ದ ಮರಗಳು ಬಿದ್ದು ಹೋದವು. ಕೆಲವು ಸಮಯ ಪೂಜಾ ವಿಧಿವಿಧಾನ ಸ್ಥಗಿತಗೊಂಡಿತ್ತು. ಇದನ್ನು ಗಮನಿಸಿದ ತವಕ್ಕಲ್​ ಕುಟುಂಬಸ್ಥರು ತಮ್ಮ ಸ್ವಾಧೀನದಲ್ಲಿದ್ದ ಭೂತಪ್ಪ ದೇವಾಲಯವಿರುವ ಭೂಮಿಯನ್ನು ಪೂಜಾ ವಿಧಿವಿಧಾನ ಮತ್ತು ಆರಾಧನೆ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಮತ್ತು ಧಾಮಿರ್ಕ ಐಕ್ಯತೆ, ಸಮಾಜದಲ್ಲಿ ಭಾವೈಕತೆ ಮೂಡಿಸುವ ನಿಟ್ಟಿನಲ್ಲಿ ಭೂಮಿಯ ಹಕ್ಕನ್ನು ಈ ಮೂರು ಕುಟುಂಬಸ್ಥರಿಗೆ ಉಚಿತವಾಗಿ ದಾನಪತ್ರದ ಮೂಲಕ ಹಸ್ತಾಂತರಿಸಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡ ಎಚ್​.ಎಸ್​.ಸಾದಿಕ್​ ತಿಳಿಸಿದರು.
ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

PHOTOS/ ಪೇಜ್‌-3 ಪಾರ್ಟಿಗಳಿಗೆ ಫೇಮಸ್‌ ಆಗಿತ್ತಂತೆ ಅಕುಲ್​ ಒಡೆತನದ ಈ ರೆಸಾರ್ಟ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
