ಕೊಪ್ಪಳ:ನೂರಾರು ಅಯ್ಯಪ್ಪಸ್ವಾಮಿ ಮಲಾಧಾರಿಗಳು ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ಪೂಜೆ, ಭಜನೆ ಮಾಡಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.
ಮುಸ್ಲಿಂ ಮನೆಯಲ್ಲಿ ಹಿಂದೂ ಧರ್ಮದ ಆಚರಣೆಗಳಂತೆ ಕಳೆದ ರಾತ್ರಿ ಅದ್ದೂರಿಯಾಗಿ ಅಯ್ಯಪ್ಪಸ್ವಾಮಿ ಪೂಜೆ ನಡೆದಿದೆ. ಕಾಶಿಂ ಅಲಿ ಮುದ್ದಾಬಳ್ಳಿ ಕುಟುಂಬ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಜೊತೆ ಅಯ್ಯಪ್ಪಸ್ವಾಮಿಯ ಕುರಿತು ಭಜನೆ ಮಾಡಿದರು. ನಂತರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕುಟುಂಬ ಸತ್ಕರಿಸಿದೆ. ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕಾಶಿಂ ಅಲಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.
ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮಾತನಾಡಿ, ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಧರ್ಮದ ಸಾರಗಳು ಗೊತ್ತಿರಬೇಕು ಎಂದರು.
ಮುಸ್ಲಿಂ ಸಮುದಾಯದ ವ್ಯಕ್ತಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿ ಪ್ರಸಾದ ಹಂಚಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮುಖಂಡ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ನನಗೆ ಅದು ಅಂದ್ರೆ​ ಇಷ್ಟ.. ಆದರೆ ಇನ್ಯಾವತ್ತೂ ಅಲ್ಲಿಗೆ ಮಾತ್ರ ಬರಲ್ಲ; ಪೂನಂ ಪಾಂಡೆ

ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
