ಅಕ್ಕಿಆಲೂರ:ಬಕ್ರೀದ್‌ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರು ಬಾಡೂಟ ಮಾಡುವುದು ಸಾಮಾನ್ಯ. ಆದ್ರೆ, ಸಮೀಪದ ಬಾಳಂಬೀಡ ಗ್ರಾಮದಲ್ಲಿ ಗುರುವಾರ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಮಾಂಸಾಹಾರ ತ್ಯಜಿಸಿ, ಸಿಹಿ ಹಂಚಿ ಹಬ್ಬ ಆಚರಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲಿಸಿ ಸವಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್!
ಶಿರಸಿ-ಹಾವೇರಿ ಹೊಂದಿಕೊಂಡಿರುವ ಗ್ರಾಮದಲ್ಲಿ ಕಳೆದ ರಾಜ್ಯ ಹೆದ್ದಾರಿಗೆ ಬಾಳಂಬೀಡ ಎರಡು ತಿಂಗಳಲ್ಲಿ ಪ್ರತ್ಯೇಕ ದುರ್ಘಟನೆಗಳಿಂದ ಐವರು ಯುವಕರು ಮೃತಪಟ್ಟಿದ್ದರು. ಬಾಳಂಬೀಡ ಗ್ರಾಮದ ಹಿಂದು- ಮುಸ್ಲಿಂ ಸಮಾಜದ ಮುಖಂಡರು, ಸಭೆ ನಡೆಸಿ ಎರಡು ಮಂಗಳವಾರ ಮತ್ತು ಮೂರು ಶುಕ್ರವಾರ ಗ್ರಾಮದ ಎಲ್ಲ ದೇವರಿಗೆ ಉಡಿ ತುಂಬಿ, ಎಲ್ಲ ಧರ್ಮಗಳ ದೇವರ ಆರಾಧನೆ ಮಾಡಿ, ಮುಂದೆ ಇಂಥ ದುರ್ಘಟನೆಗಳು ಸಂಭವಿಸಬಾರದು ಎಂದು ಪ್ರಾರ್ಥಿಸಲು ನಿರ್ಣಯ ಕೈಗೊಂಡಿದ್ದರು.
ಇದರ ಅಂಗವಾಗಿ ಯಾರೂ ಮಾಂಸಾಹಾರದ ಊಟ ಮಾಡಬಾರದು ಎಂಬ ನಿರ್ಣಯ ಅಂಗೀಕರಿಸಿದ್ದರು. ಅದರಂತೆ ಈಗ ಆಚರಣೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗುರುವಾರ ಬಕ್ರೀದ್ ಹಬ್ಬದ ಮೇಳೆ ಮುಸ್ಲಿಂ ಸಮಾಜದ ಯಾರ ಮನೆಯಲ್ಲೂ ಬಾಡೂಟ ತಯಾರಿಸದೆ, ಕಟ್ಟುನಿಟ್ಟಿನ ಆಚರಣೆಗೆ ಮುಂದಾದರು. ಹೀಗಾಗಿ ಗುರುವಾರ ಗ್ರಾಮದ ಮಾಂಸದ ಅಂಗಡಿ, ಎಗ್​​ರೈಸ್ ಅಂಗಡಿಗಳನ್ನೂ ಬಂದ್‌ ಮಾಡಲಾಗಿತ್ತು. ಊರ ಒಳಿತಿಗಾಗಿ ಕೈಗೊಂಡ ನಿರ್ಣಯದಂತೆ ಸ್ಥಳೀಯ ಮುಸ್ಲಿಮರು ನಡೆದುಕೊಂಡಿದ್ದು ಎಲ್ಲರ ಪ್ರಶಂಸೆಗೆ ಇದೀಗ ಕಾರಣವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
