ಬೆಂಗಳೂರು:ಡಿ.ಜೆ.ಹಳ್ಳಿ ವ್ಯಾಪ್ತಿ ಅಕ್ಷರಶಃ ರಣರಂಗವಾಗಿದೆ. ಅಖಂಡ ಶ್ರೀನಿವಾಸ್​ ಅವರ ಸಂಬಂಧಿ ನವೀನ್​ ಎಂಬಾತ ಮುಸ್ಲಿಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಫೇಸ್​ಬುಕ್​ ಪೋಸ್ಟ್​ ಹಾಕಿದ ಹಿನ್ನೆಲೆಯಲ್ಲಿ ಶುರುವಾದ ಕಲ್ಲುತೂರಾಟ ತೀವ್ರ ಗಂಭೀರ ಸ್ವರೂಪ ಪಡೆದಿದೆ.
ಪೊಲೀಸರು ಗಲಭೆ ನಿಯಂತ್ರಿಸಲು ಫೈರಿಂಗ್​ ಮಾಡುತ್ತಿದ್ದಾರೆ. ಈಗಾಗಲೇ 3 ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದೆ.
ನಿನ್ನೆ ರಾತ್ರಿ ಹಲವು ಕಿಡಿಗೇಡಿಗಳು ಡಿ.ಜೆ.ಹಳ್ಳಿ ಬಳಿ ಇರುವ ಪುಲಕೇಶಿ ನಗರದ ಶಾಸಕರ ಮನೆ ಬಳಿ ದಾಳಿ ನಡೆಸಿದ್ದಾರೆ. ಪೊಲೀಸ್​ ಸ್ಟೇಶನ್​, ಅಕ್ಕಪಕ್ಕದ ಮನೆಗಳನ್ನೂ ಬಿಟ್ಟಿಲ್ಲ. ಅಲ್ಲಿದ್ದ ವಾಹನಗಳನ್ನೂ ಧ್ವಂಸ ಮಾಡಿದ್ದಾರೆ.
ಆದರೆ ಇನ್ನೊಂದು ಬದಿಯಲ್ಲಿ ಮುಸ್ಲಿಂ ಯುವಕರು ಒಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನಡೆದ ಗಲಾಟೆ ಇದಾಗಿರುವುದರಿಂದ ಕಿಡಿಗೇಡಿಗಳು ಹಿಂದು ದೇವಸ್ಥಾನವನ್ನು ನಾಶ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದನ್ನು ಮನಗಂಡ ಅಲ್ಲಿನ ಒಂದಷ್ಟು ಮುಸ್ಲಿಂ ಸಮುದಾಯದ ಯುವಕರು, ಡಿ.ಜೆ.ಹಳ್ಳಿಯಲ್ಲಿರುವ ದೇಗುಲದ ಸುತ್ತ ಮಾನವ ಸರಪಳಿ ನಿರ್ಮಿಸಿ ಕಾವಲು ಕಾಯ್ದಿದ್ದಾರೆ.
ಈ ವಿಡಿಯೋ ಕೂಡ ವೈರಲ್​ ಆಗಿದೆ. ಒಂದಷ್ಟು ಯುವಕರು ಪರಸ್ಪರ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿಕೊಂಡು ದೇಗುಲದ ಸುತ್ತ ನಿಂತಿರುವ ವಿಡಿಯೋ ವೈರಲ್​ ಆಗಿದೆ. ನಾವು ಈ ದೇವಸ್ಥಾನ ಮುಟ್ಟಲು ಬಿಡುವುದಿಲ್ಲ ಎಂದು ಅದರಲ್ಲಿ ಓರ್ವ ಹೇಳಿದ್ದಾರೆ. (ಏಜೆನ್ಸೀಸ್​)
#WATCHKarnataka: A group of Muslim youth gathered and formed a human chain around a temple in DJ Halli police station limits of Bengaluru city late last night, to protect it from arsonists after violence erupted in the area. (Video source: DJ Halli local)pic.twitter.com/dKIhMjQh96
— ANI (@ANI)August 12, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 18 =
Remember me
