ಬೆಂಗಳೂರು:ಬೇಸಿಗೆಗಾಲ ಬಂತೆಂದರೆ ಬಿಸಿಲಿನ ಝಳವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸುಡು ಬಿಸಿಲು ಒಂದೆಡೆಯಾದರೆ ಶೆಕೆಯು ಕಾಣಿಸಿಕೊಳ್ಳಲು ಶುರುವಾಗಿದೆ. ತಂಪು ಪಾನಿಯಗಳ ಮೊರೆ ಹೋಗುತ್ತೇವೆ. ನಾವು ಬೇಸಿಗೆ ಸಮಯದಲ್ಲಿ ಯಾವ ಆಹಾರಗಳಿಂದ ಆದಷ್ಟು ದೂರ ಇರಬೇಕು ಎನ್ನುವ ಮಾಹಿತಿಯನ್ನು ಇಂದು ನೀಡಲಿದ್ದೇವೆ…
ಬಿಸಿ ಕಾಫಿ ಸೇವನೆ ಮಾಡಿದರೆ ನೀರಿನಾಂಶವು ಕಡಿಮೆಯಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

ಮಸಾಲೆಯುಕ್ತ ಆಹಾರಗಳೂ ದೇಹದ ಶಾಖಾ ಹೆಚ್ಚಿಸಿ ದೇಹವನ್ನು ಬಿಸಿಯಾಗಿಸುತ್ತದೆ. ವಿಪರೀತ ಬೆವರುವುದು ಹಾಗೂ ದೇಹ ನಿರ್ಜಲೀಕರಣ ಪ್ರಕ್ರಿಯೆಗಳು ಆಗುತ್ತದೆ.
ಕರಿದ ಆಹಾರವು ನಾಲಿಗೆಗೆ ರುಚಿ ನೀಡುತ್ತದೆ. ಆದರೆ ಬೇಸಿಗೆಗಾಲದಲ್ಲಿ ಈ ಆಹಾರವು ದೇಹಕ್ಕೆ ಒಳ್ಳೆದಲ್ಲ.

ಉಪ್ಪಿನಕಾಯಿ ಅತಿಯಾಗಿ ತಿಂದರೆ ಆಗ ಇದರಿಂದ ಅಜೀರ್ಣ ಸಮಸ್ಯೆ ಕಾಡಬಹುದು. ಹೀಗಾಗಿ ಬೇಸಿಗೆ ಸಮಯದಲ್ಲಿ ಉಪ್ಪಿನಕಾಯಿ ಸೇವನೆ ಕೊಂಚ ಕಡಿಮೆ ಮಾಡುವುದು ಒಳ್ಳೆಯದಾಗಿದೆ.
ಬೇಸಿಗೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ಬಾಯಿ ಒಣಗುವುದು, ತಲೆನೋವು ಇದರ ಪ್ರಮುಖ ಲಕ್ಷಣಗಳು. ಆಲ್ಕೋಹಾಲ್ ಸೇವನೆ ಮಾಡಿದರೆ ಅತಿಯಾಗಿ ಬೆವರಬಹುದು. ಇದರಿಂದ ನಿರ್ಜಲೀಕರಣ ಉಂಟಾಗಬಹುದು.

ಬೇಸಿಗೆ ಶುರುವಾಗುತ್ತಿದ್ದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಒಟ್ಟಾರೆಯಾಗಿ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ದೂರವಿದ್ದರೆ ಆರೋಗ್ಯಕ್ಕೆ ಲಾಭವೇ ಹೆಚ್ಚು.
ಬೇಸಿಗೆಯಲ್ಲಿ ಪ್ರತಿನಿತ್ಯ ರಾಗಿ ಅಂಬಲಿ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲೇ ಬೇಕು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
