ಧಾರವಾಡ:ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿ ಜಗನ್​ಗೂ ತಂದೆಯಂತೆ ತಿರುಪತಿ ತಿಮ್ಮಪ್ಪನ ಶಾಪ ತಟ್ಟಲಿದೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಕೇವಲ ಆಂಧ್ರಪ್ರದೇಶದ ದೇಗುಲವಲ್ಲ. ಅದು ಇಡೀ ಜಗತ್ತಿನ ದೇವಸ್ಥಾನ. ದೇವಸ್ಥಾನಕ್ಕೆ ಬಂದ ಹಣವನ್ನು ಅದೇ ದೇವಸ್ಥಾನದ ಉದ್ಧಾರಕ್ಕೆ ಬಳಸಬೇಕು. ಯಾರೂ ಸ್ವಾರ್ಥಕ್ಕೋಸ್ಕರ ಬಳಸಬಾರದು. ಜಾತ್ಯತೀತ ಎನ್ನುವ ಇವರು ಕೇವಲ ಹಿಂದು ದೇವಸ್ಥಾನಗಳ ಮೇಲೆ ಆಘಾತವನ್ನುಂಟು ಮಾಡುತ್ತಿದ್ದಾರೆ. ಮದರಸಾ, ಚರ್ಚ್, ವಕ್ಪ್ ಬೋರ್ಡ್​ಗಳ ಆಸ್ತಿ ಸಾಕಷ್ಟಿದೆ. ಆ ಬಗ್ಗೆ ಮಾತನಾಡದ ಸರ್ಕಾರ ಕೇವಲ ಹಿಂದು ದೇವಸ್ಥಾನಗಳ ಮೇಲಷ್ಟೇ ಕಣ್ಣು ಹಾಕುತ್ತಿದೆ. ಜಗನ್ ತಂದೆ ಈ ರೀತಿ ಮಾಡಿ ತಿರುಪತಿ ತಿಮ್ಮಪ್ಪನ ಶಾಪದಿಂದ ಸತ್ತು ಹೋದರು. ಜಗನ್ ಅದೇ ಹಾದಿ ಮುಂದುವರಿಸಿದರೆ ಅವರಿಗೂ ಶಾಪ ತಟ್ಟಲಿದೆ. ತಿರುಪತಿ ದೇವಸ್ಥಾನದ ಸ್ಥಿರಾಸ್ತಿ ಮಾರಾಟ ಮಾಡಬಾರದು ಎಂದು ಜಿಲ್ಲಾಡಳಿತದ ಮೂಲಕ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮನವಿ ರವಾನಿಸಿದ್ದೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
