ಧಾರವಾಡ:ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಹೆಸರು ಹೇಳಿಕೊಂಡು ಬಿಜೆಪಿ ಗೆದ್ದಿರುವ ಕ್ಷೇತ್ರದಲ್ಲಿ ಸ್ಪರ್ಧಿಸಲು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಯಾರಿ ನಡೆಸಿದ್ದಾರೆ. ಈ ಮೂಲಕ ಚುನಾವಣಾ ರಾಜಕೀಯಕ್ಕಿಳಿಯಲು ಸಿದ್ಧರಾಗಿದ್ದಾರೆ.
ಈಗಾಗಲೇ ತಾನು ಸ್ಪರ್ಧಿಸಬೇಕೆಂದಿರುವ ಕ್ಷೇತ್ರಗಳನ್ನು ಗುರುತಿಸಿದ್ದು, ಬಿಜಿಪಿಯ ವೋಟ್ ಬ್ಯಾಂಕ್ ಮೇಲೆ ಮುತಾಲಿಕ್ ಕಣ್ಣಿಟ್ಟಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾತನಾಡಿರುವ ಮುತಾಲಿಕ್, ನಾನು ಬಿಜೆಪಿ ಹಿಂದುತ್ವದ ವಿಚಾರದಲ್ಲಿ ದಾರಿ ತಪ್ಪಿದೆ. ಹೀಗಾಗಿ ನಾನು ಹಿಂದುತ್ವಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಬೆಳಗಾವಿ ನಗರದ 2, ಬಾಗಲಕೋಟೆಯಲ್ಲಿ 2 ಹಾಗೂ ಉಡುಪಿ, ಪುತ್ತೂರು, ಕಾರ್ಕಳ, ಶೃಂಗೇರಿ, ಧಾರವಾಡದಲ್ಲಿ ಕ್ಷೇತ್ರ ಗುರುತಿಸಿದ್ದೇವೆ. ಈ ಪೈಕಿ ಒಂದರಲ್ಲಿ ನಾನು ಸ್ಪರ್ಧಿಸುತ್ತೇನೆ. ಡಿಸೆಂಬರ್ 2ನೇ ವಾರದಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬುವುದು ನಿರ್ಧಾರವಾಗಲಿದೆ. 25 ಜನ ಪ್ರಖರ ಹಿಂದುತ್ವದ ಕಾರ್ಯಕರ್ತರು ಈ ಬಾರಿ ಸ್ಪರ್ಧೆಗಿಳಿಯುತ್ತಾರೆ. 2-3 ಜನ ಸ್ವಾಮೀಜಿಗಳೂ ಚುನಾವಣೆ ಸ್ಪರ್ಧಿಸಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ. ಆದರೆ ನನ್ನ ಬೆಂಬಲ ಮಾತ್ರ ನರೇಂದ್ರ ಮೋದಿಗೆ. ನನ್ನದು ನೇರವಾದ ಮತ್ತು ಸತ್ಯ, ಧರ್ಮ, ದೇಶಭಕ್ತಿಯ ದಾರಿ. ಇದರಲ್ಲಿ ಯಾವುದೇ ವಿಚಾರಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ರಾಜಕೀಯ ವಿಫಲತೆ ಉಂಟಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nine =
Remember me
