ಬೆಂಗಳೂರು:ಕ್ಯಾನ್ಸರ್​ನಿಂದ ಮೃತಪಟ್ಟ ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ವಿಲ್​ ಪತ್ರದ ರಹಸ್ಯ ಬಹಿರಂಗವಾಗಿದ್ದು, ರೈ ಹೆಸರಿನಲ್ಲಿ ಸುಮಾರು 1500 ದಿಂದ 2000 ಸಾವಿರ ಕೋಟಿ ರೂ. ಚರಾ ಮತ್ತು ಸ್ಥಿರಾಸ್ತಿ ಇದೆ ಎಂದು ಹೇಳಲಾಗುತ್ತಿದೆ.
ಮಕ್ಕಳು ಹಾಗೂ ಸಂಬಂಧಿಕರು ಮಾತ್ರವಲ್ಲದೇ ಮನೆ ಹಾಗೂ ತೊಟದ ಕೆಲಗಾರರು, ಚಾಲಕರು ಮತ್ತು ಗನ್​ ಮ್ಯಾನ್​ಗಳಿಗೆ ಮುತ್ತಪ್ಪ ರೈ ದಾರಿ ದೀಪವಾಗಿದ್ದಾರೆ. ರೈ ಅವರು ಸುಮಾರು 41 ಪುಟಗಳ ವಿಲ್​ ಬರೆದಿದ್ದು, ಅವರ ಹೆಸರಿನಲ್ಲಿ ಸುಮಾರು 1500-2000 ಕೋಟಿ ರೂ. ಆಸ್ತಿ ಇದೆ. 15 ವರ್ಷಗಳಿಂದ ಮನೆಗೆಲಸ ಮಾಡಿರುವ ನಂಬಿಕಸ್ಥ 25 ಕೆಲಸಗಾರರ ಹೆಸರನ್ನು ವಿಲ್​ನಲ್ಲಿ ಉಲ್ಲೇಖ ಮಾಡಿದ್ದಾರೆಂದು ರೈ ವಕೀಲರಾದ ನಾರಾಯಣ ಸ್ವಾಮಿ ಅವರು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ಭೂಗತ ಲೋಕಕ್ಕೆ ಮುತ್ತಪ್ಪ ರೈ ಬಂದಿದ್ದೇಕೆ?: ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕುತೂಹಲಕಾರಿ ವಿಚಾರಗಳು!
ಯಾರ್ಯಾರಿಗೆ ಯಾವ ರೀತಿಯಲ್ಲಿ ಸಹಾಯ ಆಗಬೇಕೆಂಬುದನ್ನು ಸಹ ಉಲ್ಲೇಖಿಸಿರುವ ರೈ, ಮನೆಗೆಲಸದವರಿಗೆ ನಿವೇಶನ ನೀಡುವುದರೊಂದಿಗೆ ಹಣವನ್ನು ಸಹ ಕೊಡಬೇಕೆಂಬ ಸೂಚನೆಯನ್ನು ವಿಲ್​ನಲ್ಲಿ ಬರೆದಿಟ್ಟಿದ್ದಾರೆ. ತಂದೆಯ ಮಾತಿನಂತೆ ಒಬ್ಬೊಬ್ಬರಿಗೆ ತಲಾ 3 ಲಕ್ಷ ರೂ. ಹಣವನ್ನು ಪುತ್ರ ರಿಕ್ಕಿ ರೈ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಬಹುದಿನಗಳಿಂದ ನಮಗೆ ಸೇವೆ ಮಾಡಿದ್ದಾರೆ. ಅವರಿಗೂ ಸಹಾಯ ಆಗಬೇಕೆಂದು ರೈ ಬರೆದಿದ್ದರು ಎನ್ನಲಾಗಿದೆ.
ಮಕ್ಕಳಾದ ರಾಕಿ ರೈ, ರಿಕಿ ರೈಗೆ ಆಸ್ತಿ ಹಂಚಿಕೆ ಮಾಡಿದ್ದಾರೆ. ಸಕಲೇಶಪುರದಲ್ಲಿ 150 ರಿಂದ 200 ಎಕರೆ ಜಮೀನು, ದೇವನಹಳ್ಳಿ, ಯಲಹಂಕ ಮತ್ತು ಬಿಡದಿಯಲ್ಲಿ 150ಕ್ಕೂ ಹೆಚ್ಚು ಎಕರೆ ಜಾಗ ಸೇರಿದಂತೆ ರಾಜ್ಯದಲ್ಲಿ 600ಕ್ಕೂ ಅಧಿಕ ಎಕರೆ ಜಮೀನು ಇದೆ. ಆಪ್ತರು ಹಾಗೂ ಸಂಬಂಧಿಕರಿಗೆ ಶೇ. 20 ರಷ್ಟು ಮಾತ್ರ ಆಸ್ತಿ ಹಂಚಿಕೆ ಮಾಡಿದ್ದಾರೆ.
ಇದನ್ನೂ ಓದಿ:VIDEO| ಅಂಡರ್​ವರ್ಲ್ಡ್​ ಡಾನ್​ಗೆ ಲವ್ ಆಗಿದ್ಹೇಗೆ? ಪತ್ನಿ ಬಗ್ಗೆ ‘ರೈ’ ಅಂತರಾಳದ ಮಾತು!
ಬಿಡದಿ ಹಾಗೂ ಸದಾಶಿವನಗರದ ಮನೆ, ಯಲಹಂಕ ಹಾಗೂ ದೇವನಹಳ್ಳಿ ಜಾಗ ಸೇರಿದಂತೆ ಸಕಲೇಶಪುರದ 150ಕ್ಕೂ ಹೆಚ್ಚು ಎಕರೆ ಕಾಫಿ ತೋಟವನ್ನು ಕಿರಿಯ ಮಗ ರಿಕ್ಕಿ ರೈ ಹೆಸರಿಗೆ ಬರೆಯಲಾಗಿದ್ದು, ಷೇರು ವ್ಯವಹಾರ, ಜಯ ಕರ್ನಾಟಕ ಸಂಘಟನೆ, ಬಂಟ್ವಾಳ, ಮಂಗಳೂರು, ಮೈಸೂರು ಹಾಗೂ ಪುತ್ತೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿರುವ ಜಮೀನನ್ನು ಹಿರಿಯ ಮಗ ರಾಕಿ ರೈ ಹೆಸರಿಗೆ ನೀಡಿದ್ದಾರೆ.
ಸಂಘಟನೆ ಯಾವುದೇ ಕಾರಣಕ್ಕೂ ಹೊಡೆಯದಂತೆ ನೋಡಿಕೊಳ್ಳಲು ಹಾಗೂ ಅಧ್ಯಕ್ಷ ಜಗದೀಶ್ ನೋಡಿಕೊಳ್ಳುವಂತೆಯೂ ರಾಕಿ ರೈಗೆ ವಿಲ್​ನಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಿಗೆ ವಿಲ್​ನಲ್ಲಿ ಮನವಿ ಮಾಡಿದ್ದಾರೆ. ಇಬ್ಬರು ಮಕ್ಕಳಿಗೂ ಬಹುತೇಕ ಒಂದು‌ ಸಾವಿರ ಕೋಟಿಯಷ್ಟು ಆಸ್ತಿ ಬರಲಿದೆ.
ಇದನ್ನೂ ಓದಿ:VIDEO| ಪತ್ನಿಯ ನೆನೆದು ಕಣ್ಣೀರಿಟ್ಟಿದ್ರು ಮುತ್ತಪ್ಪ ರೈ…!
ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಅವರಿಗೂ ಆಸ್ತಿ ಹಂಚಿಕೆ ಮಾಡಲಾಗಿದ್ದು, ಎಚ್.​ಡಿ. ಕೋಟೆಯಲ್ಲಿರೋ ಪ್ರಾಪರ್ಟಿ, ಚಿನ್ನಾಭರಣ, ಐಷಾರಾಮಿ ಕಾರು, ಕೊಟ್ಯಾಂತರ ರೂಪಾಯಿ ಹಣವನ್ನು ಈಗಾಗಲೆ ರೈ ನೀಡಿದ್ದಾರೆ. ಅಲ್ಲದೆ, ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡ ಕಟ್ಟಿಸಿಕೊಟ್ಟಿರೋ ಮುತ್ತಪ್ಪ ರೈ, ಅನುರಾದ ಜತೆಗಿದ್ದ ಟೈಂನಲ್ಲಿಯೇ ಅವರಿಗೆ ಸೇರಬೇಕಾದ್ದನ್ನು ವಿಲ್​ನಲ್ಲಿ ಉಲ್ಲೇಖ ಮಾಡಿದ್ದಾರೆ.
ವಿದೇಶದಲ್ಲಿ ಮುತ್ತಪ್ಪ ರೈ ಹೆಸರಿನಲ್ಲಿ ಒಂದು ರೂಪಾಯಿಯಷ್ಟು ಆಸ್ತಿ‌ ಇಲ್ಲ ಅನ್ನೋದು ವಿಲ್​ನಿಂದ ಬಹಿರಂಗವಾಗಿದೆ. ಸಾವಿರಾರು ಕೋಟಿ ವಿದೇಶದಲ್ಲಿ ಆಸ್ತಿ ಇದೆ ಅನ್ನೋದು ಸುಳ್ಳು. ತನ್ನ ಮಗನ ವ್ಯವಹಾರ ಬಿಟ್ಟರೆ ರೈಗೆ ವಿದೇಶದಲ್ಲಿ ವ್ಯವಹಾರವೇ ಇಲ್ಲ ಎಂದು ವಿಲ್ ಮಾಡಿದ ಮುತ್ತಪ್ಪ ರೈ ಅಡ್ವೋಕೇಟ್ ನಾರಾಯಣಸ್ವಾಮಿ ಹೇಳಿದ್ದಾರೆ. ಅಲ್ಲದೆ, ಅನುರಾದಗೂ ಮುತ್ತಪ್ಪ ರೈ ಮಕ್ಕಳಿಗೂ‌ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರ್ತಾರೆ. ಆಸ್ತಿ ವಿಚಾರವಾಗಿ ಅನುರಾದ ರೈ ಕೇಸ್ ಹಾಕ್ತಾರೆ ಅನ್ನೋದೆಲ್ಲ ಸುಳ್ಳು ಎಂದು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:VIDEO| ರೌಡಿಸಂ ಹಾದಿ ಹಿಡಿದವರಿಗೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ನೀಡಿದ್ದರು ಉಪಯುಕ್ತ ಸಲಹೆ!
ಎಲ್ಲವನ್ನೂ ಗೆದ್ದು ಕ್ಯಾನ್ಸರ್‌ಗೆ ಸೋತ ಮುತ್ತಪ್ಪ ರೈ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:four × 3 =
Remember me
