ಬೆಂಗಳೂರು:ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ.. ಒಟ್ನಲ್ಲಿ ಲ್ಯಾಪ್​ಟಾಪ್​ ಕಡ್ಡಾಯವಾಗಿ ಇರಲೇ ಬೇಕು… ಊಟ- ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ.. ಲ್ಯಾಪ್​ಟಾಪ್​ ತಗೋಳೋಕೆ ಏನ್​ ಪ್ರಾಬ್ಲಂ? ನಿಮ್ಮ ಲೈಫ್​ ಸ್ಪೈಲ್​ ಆಗಬಾರದು ಅಂದ್ರೆ ನಾವೇಳ್ದಾಗೆ ಮಾಡಿ…
ಇದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಎಚ್​ಒಡಿ ಪ್ರೊ. ಮುರಳೀಧರ್​ ಕೊಟ್ಟ ಖಡಕ್​ ವಾರ್ನಿಂಗ್​. ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್​ ಮಾಡಿ ಸಂವಹನ ನಡೆಸಿದ ಪ್ರೊ.ಮುರಳೀಧರ್​, ಮಾತಿನ ಆರಂಭದಲ್ಲೇ ‘ಇವಾಗ ಇನ್ನೊಂದು ಮಳೆ ಬರುತ್ತೆ ನೋಡಿ’ ಎಂದು ಶಾಕ್​ ನೀಡಿದರು.
ಇದನ್ನೂ ಓದಿರಿಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿಗಳಾದಿಯಾಗಿ ‘ಸರ್​… ಏಕಾಏಕಿ ಲ್ಯಾಪ್​ಟಾಪ್​ ಅಂದ್ರೆ ಹೇಗೆ? ನಮ್ಮ­ತ್ರ ಹಣ ಇಲ್ಲ…’ ಎಂದು ಗೋಗರೆದರೂ ಕ್ಯಾರೆ ಎನ್ನಲಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳು, ‘ಈ ಬಗ್ಗೆ ಲೆಟರ್ ಕೊಡಿ. ನಮ್ಮ ತಹಸೀಲ್ದಾರ್ ಬಳಿ ಮಾತಾಡುತ್ತೇವೆ. ಇಲ್ಲವೇ ನಾವು ಕಟ್ಟಿದ ಶುಲ್ಕದ ಹಣ ವಾಪಸ್​ ಕೊಟ್ಟುಬಿಡಿ’ ಎಂದರು. ‘ಇದ್ಯಾವುದರ ಬಗ್ಗೆಯೂ ಕೇಳಬೇಡಿ… ಕಡ್ಡಾಯವಾಗಿ ಎಲ್ಲರೂ ಲ್ಯಾಪ್​ಟಾಪ್​ ಹೊಂದಿಸಿಕೊಳ್ಳಬೇಕು ಅಷ್ಟೆ. ಇದು ಫೈನಲ್’​ ಎಂದು ಎಚ್ಚರಿಸಿದರು.
ಇದನ್ನೂ ಓದಿರಿಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!
ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಶುರುವಾದ್ರೆ ಲ್ಯಾಪ್​ಟಾಪ್​ ಹೊಂದಿಸೋದು ಹೇಗೆ? ಲ್ಯಾಪ್​ಟಾಪ್​ ಇಲ್ಲಾಂದ್ರೆ ಎಕ್ಸಾಂ ಮಿಸ್​ ಆಗುತ್ತೆ.. ಎಂಬ ಟೆನ್ಶನ್​ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಪ್ರೊಫೆಸರ್ ಬಳಿ ವಿದ್ಯಾರ್ಥಿಗಳು, ‘ನಮ್ಮ ಲೈಪ್​ ಹಾಳಾಗುತ್ತೆ ಸರ್​.. ದಯವಿಟ್ಟು ಪರ್ಯಾಯ ವ್ಯವಸ್ಥೆ ಮಾಡಿ’ ಎಂದರೂ ಅವರು, ‘ನಿಮ್ಮ ಜೀವನ ಹಾಳಾಗಬಾರದು ಅಂದ್ರೆ ಲ್ಯಾಪ್​ಟಾಪ್​ ತಗೋಳಿ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು, ಈ ಸಂಭಾಷಣೆಯ ಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.
ಈ ವಿಡಿಯೋ ನೋಡಿ
https://www.facebook.com/VVani4U/videos/2711964739022919/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + sixteen =
Remember me
