ಬೆಂಗಳೂರು:ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ಮಹತ್ವದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ಪಾಲ್ಗೊಂಡಿರಲಿಲ್ಲ. ಇಷ್ಟುದಿನ ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಚಿವರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳದಿರಲು ಕಾರಣ ಏನಿರಬಹುದು ಎಂಬ ಅನುಮಾನ ಎಲ್ಲೆಡೆ ಶುರುವಾಗಿತ್ತು.
ಅದರಲ್ಲೂ ಕೊವಿಡ್​-19 ನಿಯಂತ್ರಣದ ಉಸ್ತುವಾರಿ ಹೊತ್ತ ಡಾ. ಸುಧಾಕರ್​ ಅವರು ಇಷ್ಟು ಮುಖ್ಯ ಸಭೆಗೆ ಗೈರಾಗಿದ್ದು ಸರಿಯಲ್ಲ. ಅದಕ್ಕಿಂತಲೂ ಮುಖ್ಯ ಕೆಲಸ ಏನಿತ್ತು ಅವರಿಗೆ ಎಂಬ ಟೀಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭವಾಗಿತ್ತು.
ಇದೀಗ ಡಾ. ಸುಧಾಕರ್​ ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಾವು ಸಭೆಗೆ ಹಾಜರಾಗದೆ ಇರಲು ಕಾರಣ ಏನು ಎಂಬುದನ್ನು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.
ನನ್ನ 82 ವರ್ಷದ ತಂದೆ ಜ್ವರ ಮತ್ತು ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೊವಿಡ್​ ಟೆಸ್ಟ್ ಮಾಡಲಾಗಿದೆ. ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇವೆ. ದಯವಿಟ್ಟು ಅವರ ಆರೋಗ್ಯಕ್ಕಾಗಿ ನಿಮ್ಮೆಲ್ಲರ ಹಾರೈಕೆ, ಪ್ರಾರ್ಥನೆ ಇರಲಿ ಎಂದಿದ್ದಾರೆ.
ಹಾಗೇ, ಡಾ. ಸುಧಾಕರ್​ ಅವರ ಮನೆಯ ಕೆಲಸದ ಸಿಬ್ಬಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಈಗಾಗಲೇ ಗುಟ್ಟಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಕೆಲಸದವರ ಪ್ರಾಥಮಿಕ ಸಂಪರ್ಕದಲ್ಲಿ ಯಾರೆಲ್ಲ ಇದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಸಚಿವರು ತಮ್ಮ ತಂದೆಗೆ ಕರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ಇಂದಿನ ಸಭೆಯಲ್ಲಿ ಪಾಲ್ಗೊಂಡಿಲ್ಲ. ವರದಿ ಬರುವವರೆಗೂ ಹೋಂ ಕ್ವಾರಂಟೈನ್​ ಆಗಲು ನಿರ್ಧರಿಸಿದ್ದಾರೆ.
My 82 years old father has been admitted in hospital with complaints of fever & cough. He has undergone Covid19 test as well. We anxiously await results. Need your prayers and blessings..
— Dr Sudhakar K (@mla_sudhakar)June 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
