ನಮ್ಮ ಚಿಕ್ಕ ಕುಟುಂಬದಲ್ಲಿ ಅಪ್ಪನೇ ಆಲದ ಮರ. ಬಹಳ ವರ್ಷಗಳ ಬಳಿಕ ಹುಟ್ಟಿದ ನಾನು ಅವರ ಮುದ್ದಿನ ಮಗಳು. ಮೊದಲ ಮಗು ಹೆಣ್ಣಾಗಲಿ ಅಪ್ಪ ದೇವರಲ್ಲಿ ಹರಕೆ ಕಟ್ಟಿದ್ದರಂತೆ. ಆ ದೇವರ ವರದಿಂದ ಜನಿಸಿದ್ದಕ್ಕೆ ನನ್ನ ಮೇಲೆ ತಂದೆಯವರದ್ದು ಬಹಳ ಪ್ರೀತಿ. ನನಗೆ ತಂಗಿ, ತಮ್ಮ ಇದ್ದರೂ ಅಪ್ಪನ ಪ್ರೀತಿಯ ಹೆಚ್ಚಿನ ಪಾಲು ನನಗೆ. ನಾನು ಯಾವುದೇ ಕೆಲಸಕ್ಕೂ ಮುಂದಾದರೂ ಅದಕ್ಕೆ ಮೊದಲ ಒಪ್ಪಿಗೆ ಅಪ್ಪನದಾಗಿರುತ್ತಿತ್ತು. ಎಂದಿಗೂ ಬೇಸರಿಸಿಕೊಂಡವರಲ್ಲ. ಹಾಗಾಗಿ ಅಪ್ಪ ನನ್ನ ಜೀವನದ ಮೊದಲ ಹೀರೋ. ನಾನು ಅವರ ಎದೆಯ ಮೇಲೆ ಇಟ್ಟ ಪುಟ್ಟ ಹೆಜ್ಜೆ, ತೊದಲು ನುಡಿಯೇ ಅವರಿಗೆ ಸ್ವರ್ಗ ಸದೃಶವಾಗಿತ್ತು. ಬೆಳೆದು ದೊಡ್ಡವಳಾದ ಮೇಲೆ ಹಾಸ್ಟೆಲ್​ಗೆ ಹೋಗುವಾಗ ಅವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗಗಳು ಇವೆ. ಆಗ ಮಗು ನಾನೋ, ಅವರೂ ಎಂದು ಅನ್ನಿಸಿದ್ದಿದೆ. ಆ ಭಾವನೆಗೆ ಇಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ಅಪ್ಪನ ತೋಳ ಸ್ಪರ್ಶದ ಅನುಭವ ಇಂದಿಗೂ ನನ್ನನ್ನು ತೇಲಿಸುತ್ತಿದೆ.
| ಅಕ್ಷತಾ ನಂದಿಕೇಶ್ವರಮಠ ವಿಜಯಪುರ
ಇಂದು ಅಪ್ಪನ ದಿನ: ಅಪ್ಪ ಇದ್ದಾರೆಂಬ ಭರವಸೆಯೇ ನನಗೆ ಶಕ್ತಿ, ಸ್ಫೂರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
