ಬೆಂಗಳೂರು:ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಯೋಜನೆ ಬಿಜೆಪಿ ಕನಸಿನ ಕೂಸು. ಅವರವರ ಸರ್ಕಾರ ಇದ್ದಾಗ ಯೋಜನೆ ತಮ್ಮದೇ ಎಂದು ಹೇಳಿಕೊಳ್ಳುವುದು ಸಹಜವೆಂದು ಕಾಂಗ್ರೆಸ್, ಜೆಡಿಎಸ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ಕುಟುಕಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, 2018ರ ಫೆ. 19ರಂದು ದಶಪಥ ಹೆದ್ದಾರಿ ಯೋಜನೆ ಘೋಷಿಸಿದರು. 2018ರ ಮಾ.24ರಂದು ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಲಾನ್ಯಾಸ ಮಾಡಲಾಯಿತು. ಈ ಭಾಗದ ಬಹು ದಿನದ ಕನಸು ನಾಳೆ ನನಸಾಗಲಿದ್ದು, ದಶಪಥ ಹೆದ್ದಾರಿಯನ್ನು ಮೋದಿಯವರು ಭಾನುವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅಧಿಕೃತ ದಿನಾಂಕ ವಿವರಿಸುವ ಮೂಲಕ ದಶಪಥ ಹೆದ್ದಾರಿ ಯೋಜನೆ ಬಿಜೆಪಿ ಸರ್ಕಾರದ್ದು ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.
ಇದನ್ನೂ ಓದಿ:ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವ: ಧ್ರುವನಾರಾಯಣ ನಿಧನಕ್ಕೆ ಗಣ್ಯರ ಕಂಬನಿ
ಗಡ್ಕರಿ ಸೂಚನೆಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಬಳಿಕ ಈ ಭಾಗದ ಉದ್ಯಮ-ವಹಿವಾಟು, ಪ್ರವಾಸೋದ್ಯಮ ಹೊಸ ಆಯಾಮ ಪಡೆದುಕೊಳ್ಳಲಿದೆ. ಹೆದ್ದಾರಿ ಪಕ್ಕದ ಬಳಕೆ ರಸ್ತೆ, ಶೌಚ ಗೃಹ ಸೇರಿ ಮೂಲ ಸವಲತ್ತುಗಳ ನಿರ್ಮಾಣ ಕಾರ್ಯ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೈಸ್ ಕಂಪನಿ ಹಿಡಿದು ತಂದರು. ಆದರೆ ಅದು ಬೆಂಗಳೂರು ಬಿಟ್ಟು ಮುಂದಕ್ಕೆ ಹೋಗಲೇ ಇಲ್ಲ. ಈಗಿರುವ ದ್ವಿಪಥ ರಸ್ತೆ ಇಕ್ಕಟ್ಟಾಗಿ ಸಂಚಾರದ ಅವಧಿ ನಾಲ್ಕು ತಾಸು ಹಿಡಿಯುತ್ತಿತ್ತು. ದಶಪಥ ಹೆದ್ದಾರಿಯಿಂದ ಒಂದೂವರೆ ತಾಸಿನಲ್ಲೇ ಮೈಸೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಮುಟ್ಟಿನ ರಕ್ತ ಸಂಗ್ರಹಿಸಿ 50 ಸಾವಿರ ರೂ.ಗೆ ಮಾರಾಟ! ಗಂಡನ ಮನೆಯ ಕರಾಳತೆ ಬಿಚ್ಚಿಟ್ಟ ವಿವಾಹಿತೆ

ಹಿಂದುತ್ವ ಅಜೆಂಡಾ ಮೂಲಕ ಮಂಡ್ಯದಲ್ಲಿ ಬೇರು ಬಿಡಲು ಬಿಜೆಪಿ ಪ್ಲಾನ್: ಟಿಪ್ಪು ವಿರೋಧಿ ಅಸ್ತ್ರ ಬಳಕೆ

ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವ: ಧ್ರುವನಾರಾಯಣ ನಿಧನಕ್ಕೆ ಗಣ್ಯರ ಕಂಬನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
