ಮೈಸೂರು: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ನಗರದಲ್ಲಿ ಕೋಳಿ ಮಾಂಸ ಮಾರಾಟಕ್ಕೆ ಹೇರಿದ್ದ ನಿಷೇಧವನ್ನು ಮಹಾನಗರ ಪಾಲಿಕೆ ಹಿಂದಕ್ಕೆ ಪಡೆದಿದೆ.
ನಾಳೆಯಿಂದಲೇ ಕೋಳಿ ಮಾಂಸ ಮಾರಾಟಕ್ಕೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಇತ್ತೀಚೆಗೆ ಮೈಸೂರಿನಲ್ಲಿ ಕೊಕ್ಕರೆ ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹಕ್ಕಿಜ್ವರ ಇರಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮಾರಾಟ ನಿಷೇಧಿಸಲಾಗಿತ್ತು.
ಕೋಳಿ ಮಾಂಸ ಮಾರಾಟ ನಿಷೇಧ ಮಾಡುತ್ತಿದ್ದಂತೆ ಕುರಿ, ಮೇಕೆ ಮಾಂಸಕ್ಕೆ ಅಧಿಕ ಬೇಡಿಕೆ ಕಂಡು ಬಂದಿತ್ತು. ಅಲ್ಲದೆ ಮಾಂಸದ ದರ ಕೂಡ ಅಧಿಕವಾಗಿತ್ತು.
ಮೈಸೂರಿನ ಕೋಳಿಗಳಲ್ಲಿ ಹಕ್ಕಿಜ್ವರದ ವೈರಸ್​ ಇಲ್ಲ ಎಂದು ಪಶುಪಾಲನ ಇಲಾಖೆ ವರದಿ ನೀಡಿದ ಬಳಿಕ ನಿಷೇಧ ತೆರವುಗೊಳಿಸಲಾಗಿದೆ.ವಾರದಲ್ಲಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)
ಏಪ್ರಿಲ್​ 15ರಿಂದ ಪ್ರಯಾಣಕ್ಕೆ ವಿಮಾನ ಯಾನ ಸಂಸ್ಥೆಗಳಿಂದ ಟಿಕೆಟ್​ ಬುಕಿಂಗ್​ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 2 =
Remember me
