ಮೈಸೂರು:ಮೈಮುಲ್‌ನಲ್ಲಿ ಒಂದೊಂದು ಹುದ್ದೆಗೆ ತಲಾ 25ರಿಂದ 30 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಮೈಸೂರು- ಚಾಮರಾಜನಗರ ಹಾಲು ಉತ್ಪಾದಕರ ಸಹಕಾರ ಸಂಘ (ಮೈಮುಲ್​)ದಲ್ಲಿ 150 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಒಂದೊಂದು ಹುದ್ದೆಯನ್ನ ತಲಾ 25-30 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಇದರಲ್ಲಿ 50-60 ಕೋಟಿ ಹಣ ಸಂಗ್ರಹ ಆಗಿದೆ. ಯಾರು ಹಣ ಸಂಗ್ರಹ ಮಾಡಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ ಎಂದರು.ಇದನ್ನೂ ಓದಿರಿಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ
ಸಹಕಾರ ಕ್ಷೇತ್ರದ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲ ಮಾಡುವುದಕ್ಕಾಗಿ ಇಲ್ಲ. ಸಹಕಾರ ಕ್ಷೇತ್ರದ ಪ್ರಭಾವ, ಸಂಗ್ರಹಿಸಿದ ಹಣ ಚುನಾವಣೆಗೂ ಬಳಕೆ ಆಗುತ್ತಿದೆ. ನಾವು ಯಾರನ್ನು ನಂಬಿದ್ದೆವೋ ಅವರು ನಮ್ಮ ಜತೆಯಲ್ಲಿ ಇಲ್ಲ. ಹೊಸ ನಾಯಕತ್ವ ಸೃಷ್ಟಿ ಮಾಡಬೇಕಿದೆ. ಆದ್ದರಿಂದ 7 ಜನರ ಸಿಂಡಿಕೇಟ್ ಮಾಡಿದ್ದೇವೆ. ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರಿನಲ್ಲಿ ನಾನೇ ಖುದ್ದು ಸಭೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

ಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + fourteen =
Remember me
