| ಅವಿನಾಶ್ ಜೈನಹಳ್ಳಿಮೈಸೂರುನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಮರದ ಅಂಬಾರಿ ಹೊರಿಸುವ ತಾಲೀಮಿಗೆ ಭಾನುವಾರ ಚಾಲನೆ ದೊರೆಯಿತು. ಮೊದಲದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿ 600 ಕೆಜಿ ತೂಕದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದ್ದಾನೆ. ಅಭಿಮನ್ಯು, ಗಜ ಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಹಿಂದೆ ಕಾವೇರಿ, ವಿಜಯಾ ಆನೆಗಳು ಹೆಜ್ಜೆ ಹಾಕಿದವು. ಇನ್ನು ನವರಾತ್ರಿಯ ಎರಡನೇ ದಿನ ಅರಮನೆ ಅಂಗಳದಲ್ಲಿ ರಾಜವಂಶಸ್ಥರಿಂದ ನವರಾತ್ರಿ ಪೂಜಾ ಕಾರ್ಯಕ್ರಮ ಮುಂದುವರಿಯಿತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ಪೂಜೆ ನಡೆಸಿದರು.
ಮಂಗಳವಾದ್ಯದೊಂದಿಗೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ಅರಮನೆ ಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು. ಮೆರವಣಿಗೆಯಿಂದ ಸವಾರಿ ತೊಟ್ಟಿಗೆ ಬಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಭಣಗುಟ್ಟಿದ ಪ್ರವಾಸಿ ತಾಣಗಳು:ಕರೊನಾ ಕಾರಣಕ್ಕೆ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಭಾನುವಾರವೂ ಪ್ರಮುಖ ಪ್ರವಾಸಿತಾಣಗಳು ಜನರಿಲ್ಲದೆ ಭಣಗುಟ್ಟಿದವು. ಚಾಮುಂಡಿ ಬೆಟ್ಟ, ಮೃಗಾಲಯ, ರೈಲ್ವೆ ಮ್ಯೂಸಿಯಂ ಸೇರಿ ಹಲವು ಪ್ರವಾಸಿ ತಾಣಗಳಲ್ಲಿ ನಿರ್ಬಂಧ ತೆರವಾಗಿದ್ದರೂ ನಿರೀಕ್ಷಿತ ಮಟ್ಟದ ಪ್ರವಾಸಿಗರು ಕಾಣಿಸಲಿಲ್ಲ. ಸಂಜೆಯಾಗುತ್ತಿದ್ದಂತೆ ನಗರದಲ್ಲಿ ತಿಳಿ ಬೆಳಕಿನೊಂದಿಗೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುವ ದೀಪಾಲಂಕಾರ ವೀಕ್ಷಿಸಲು ಸಾರ್ವಜನಿಕರು ರಸ್ತೆಗಿಳಿದಿದ್ದರಿಂದ ಕೆಲವೆಡೆ ಮಾತ್ರ ವಾಹನಗಳ ಸಂಚಾರ ದ್ವಿಗುಣವಾಗಿ, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತು.
ಈ ಬಾರಿ ಮೂರ್ನಾಲ್ಕು ದಿನಗಳ ಮೊದಲೇ ವಿದ್ಯುತ್ ದೀಪಾಲಂಕಾರ ಪೂರ್ಣಗೊಂಡಿತು. ಹೀಗಾಗಿ ಜನರು ದಸರೆಗೂ ಮುನ್ನವೇ ದೀಪಾಲಂಕಾರದ ಮುಂದೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಅರಮನೆ ಅಂಗಳದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನ ಹಾಸನದ ವಿದ್ವಾನ್ ಶಶಾಂಕ್ ಸುಬ್ರಹ್ಮಣಂ ಮತ್ತು ತಂಡದಿಂದ ಪ್ರಸ್ತುತಪಡಿಸಿದ ಕೊಳಲುವಾದ ಗಮನ ಸೆಳೆಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
