ಬೆಂಗಳೂರು:ಕರೊನಾ ಕಾರಣದಿಂದ ಎರಡು ವರ್ಷ ಕಳೆಗುಂದಿದ್ದ ಮೈಸೂರು ದಸರಾಕ್ಕೆ ಈ ಬಾರಿ ಮೆರಗು ಬರಲಿದೆ. ಮೈಸೂರು ದಸರಾ ಉತ್ಸವವನ್ನು ವೈಭವೋಪೇತವಾಗಿ ಆಚರಿಸಲು ಸಮಿತಿ ನಿರ್ಣಯಿಸಿದೆ. ಸೆ.26ಕ್ಕೆ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 5ರಂದು ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಅದೇ ರೀತಿ ಮೈಸೂರು ದಸರಾಗೆ ಅಂತಾರಾಷ್ಟ್ರೀಯ ಪ್ರಚಾರ ಕೊಡಲು ಹಾಗೂ ಟೂರಿಸಂ ಸರ್ಕೀಟ್ ನಿರ್ವಿುಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆ ತೀರ್ವನಿಸಿದೆ. ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು. ದಿನಕ್ಕೆ ಒಬ್ಬರಂತೆ ರಾಷ್ಟ್ರೀಯ ಕಲಾವಿದರನ್ನು ಮುಖ್ಯ ಆಕರ್ಷಣೆಯಾಗಿ ಆಹ್ವಾನಿಸಲಾಗುವುದು. ಶ್ರೀರಂಗಪಟ್ಟಣ, ಚಾಮರಾಜನಗರಗಳಲ್ಲೂ ವೈಭವದ ದಸರಾ ಆಚರಿಸಲಾಗುತ್ತದೆ ಎಂದರು.
ಟೂರಿಸಂ ಸರ್ಕೀಟ್:ಟೂರಿಸಂ ಸರ್ಕೀಟ್ ಮಾಡಲು ತೀರ್ವನಿಸಲಾಗಿದೆ ಮುಂದಿನ ಒಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗುತ್ತದೆ. ಮೈಸೂರು-ಹಂಪಿ, ಮೈಸೂರು-ಬೇಲೂರು-ಹಳೆಬೀಡು ಹೀಗೆ ಸರ್ಕೀಟ್ ನಿರ್ವಿುಸಿ ಪ್ರವಾಸಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ. ಪ್ರವಾಸಿಗರು ಒಂದು ಟಿಕೆಟ್ ಖರೀದಿ ಮಾಡಿದರೆ ಎಲ್ಲ ಸವಲತ್ತು ಸಿಗುವ ವ್ಯವಸ್ಥೆ ಮಾಡುತ್ತೇವೆ. ಈ ಸಂಬಂಧ ಸರ್ಕಾರ ಖಾಸಗಿ ಸಹಭಾಗಿತ್ವ ಪಡೆಯಲಿದೆ ಎಂದು ಹೇಳಿದರು.
ದಸರಾ ಉದ್ಘಾಟಕರು ಯಾರು ಎನ್ನುವುದು ಇನ್ನೂ ತೀರ್ವನವಾಗಿಲ್ಲ. ಸಮಿತಿ ನನ್ನ ವಿವೇಚನೆಗೆ ಬಿಟ್ಟಿದೆ. ಈ ಬಗ್ಗೆ ರ್ಚಚಿಸಿ ಬಳಿಕ ಘೊಷಣೆ ಮಾಡಲಾಗುವುದು.
|ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸಾಂಪ್ರದಾಯಿಕ ಆಚರಣೆ:ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸುತ್ತೇವೆ. ಗಜಪಯಣ, ಮಾವುತರಿಗೆ ಗೌರವ ಕಾಣಿಕೆ ಕೊಟ್ಟು ಕಾರ್ಯಕ್ರಮ ಮಾಡುತ್ತೇವೆ. ಈ ಬಾರಿ ವಸ್ತು ಪ್ರದರ್ಶನ 15 ದಿನ ಮೊದಲೇ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ:ದಸರಾ ಅದ್ದೂರಿಯಾಗಿ ಆಚರಿಸಬೇಕು ಎಂದು ಮೈಸೂರು, ಮಂಡ್ಯ, ಚಾಮರಾಜನಗರ ಜನರ ಅಭಿಪ್ರಾಯವಿದೆ. ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸುವ ವ್ಯವಸ್ಥೆ ಮಾಡಬೇಕಿದೆ. ಕರೊನಾ ಬಳಿಕ ದಸರಾ ಆಗುತ್ತಿದೆ. ಹೀಗಾಗಿ ಹೆಚ್ಚಿನ ಪ್ರಚಾರ ಕೊಡುತ್ತೇವೆ. ದಸರಾ ಬ್ರಾ್ಯಂಡ್ ನೇಮ್ ಆಗಬೇಕು. ಈ ಹಿನ್ನೆಲೆಯಲ್ಲಿ ಮುಂಬೈ ಸೇರಿದಂತೆ ಮೆಟ್ರೋಪಾಲಿಟನ್ ಸಿಟಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರಾಗೆ ಪ್ರಚಾರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಮೂಡಾದಿಂದ 10 ಕೋಟಿ ರೂ.ನೆರವು:ಮೈಸೂರು ದಸರಾಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) 10 ಕೋಟಿ ರೂ. ನೀಡಲಿದೆ. ಸಿಎಸ್​ಆರ್ ಫಂಡ್ ಬಳಕೆಗೆ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅರಮನೆ ಒಳಗಿನ ಕಾರ್ಯಕ್ರಮಗಳ ವೆಚ್ಚವನ್ನು ಅರಮನೆಯವರು ನೋಡಿಕೊಳ್ಳುತ್ತಾರೆ. ಉಳಿದ ವೆಚ್ಚಗಳನ್ನು ಸರ್ಕಾರ ಭರಿಸಲಿದೆ.
ದಸರೆಗಿಲ್ಲ ದಶಪಥ:ದಸರಾ ಸಂದರ್ಭದಲ್ಲೇ ಮೈಸೂರು-ಬೆಂಗಳೂರು ದಶಪಥ ರಸ್ತೆ ಉದ್ಘಾಟನೆ ಮಾಡುವ ಕುರಿತ ಪ್ರಶ್ನೆಗೆ, ಮಳೆ ಕಾರಣ ಕಾಮಗಾರಿ ಪೂರ್ಣವಾಗುವುದು ತಡವಾಗಬಹುದು. ಹೀಗಾಗಿ ಒಂದೆರಡು ತಿಂಗಳು ತಡವಾಗಬಹುದು ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಜನಪ್ರತಿನಿಧಿಗಳ ಸಲಹೆ:ಈ ಬಾರಿ ವೈಭವದ, ಆಕರ್ಷಕ, ಸಾಂಪ್ರದಾಯಿಕ ದಸರಾ ಆಚರಣೆ ಜನಪ್ರತಿನಿಧಿಗಳು ಮಾಡುವುದಕ್ಕೆ ಹೇಳಿದ್ದಾರೆ. ಮಳೆ, ಬೆಳೆ ಚೆನ್ನಾಗಿ ಆಗಿರುವುದರಿಂದ ಅದ್ದೂರಿ ದಸರಾ ಆಚರಿಸಲು ಸಮಿತಿ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ದಸರಾ ನೆಪದಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ದೂರ ಆಗಬಾರದು. ದಿನನಿತ್ಯದ ಜನರ ಕೆಲಸಗಳಿಗೆ ತೊಂದರೆ ಆಗದಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದರು.
ನಿಮ್ಮೂರಿಗಿನ್ನು ಇವರೇ ಇನ್​ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಕ್ಕ ಹೃದಯಾಘಾತದಿಂದ ಸಾವು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × 5 =
Remember me
