ಮೈಸೂರು:ಕರೊನಾ ಸೋಂಕಿತರ ಸಂಖ್ಯೆಯ ಏರಿಕೆಯಲ್ಲಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೈಸೂರಿನಲ್ಲಿ ಈಗ ಸೋಂಕಿತರೆಲ್ಲರೂ ಗುಣಮುಖರಾಗಿದ್ದು, ಇದೀಗ ಮೈಸೂರು ಕರೊನಾಮುಕ್ತ ಜಿಲ್ಲೆಯಾಗಿದೆ.
ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿತ್ತು. ಒಂದು ಹಂತದಲ್ಲಿ ರಾಜಧಾನಿ ಬೆಂಗಳೂರನ್ನು ಕೂಡ ಮೈಸೂರು ಮೀರಿಸಿತ್ತು. ನಮ್ಮ ರಾಜ್ಯದ ‘ವುಹಾನ್’ ಆಗುವ ಭೀತಿ ಮೂಡಿಸಿತ್ತು.
ಒಂದು ಹಂತದಲ್ಲಿ ಇಲ್ಲಿ ಒಟ್ಟು 90 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತ, ಪೈಕಿ ಇಬ್ಬರು ಗುಣಮುಖರಾಗಲು ಬಾಕಿ ಇತ್ತು. ಅವರು ಸಹ ಶುಕ್ರವಾರ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದರೊಂದಿಗೆ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.
ಇದನ್ನೂ ಓದಿಟ್ರೆಕ್ಕಿಂಗ್ ವೇಳೆ 20 ಅಡಿ ಮೇಲಿಂದ ಬಿದ್ದಿದ್ದ ವಿದೇಶಿ ಯುವತಿ ಗುಣಮುಖ
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾ.21ರಂದು ದುಬೈನಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿತ್ತು. ಕಡೆಯದಾಗಿ ಏ.29ರಂದು ಸೋಂಕು ಪ್ರಕರಣ ಕಂಡುಬಂದಿತ್ತು. ಒಟ್ಟು 90 ಸೋಂಕಿತರ ಪೈಕಿ 74 ಜನ ಜುಬಿಲೆಂಟ್ ಕಾರ್ಖಾನೆ ನೌಕರರು ಹಾಗೂ ಅವರಿಗೆ ಸಂಬಂಧಿಸಿದವರಾಗಿದ್ದಾರೆ.
ಜಿಲ್ಲೆಯಲ್ಲಿ ಮೇ 4ರಿಂದ ಕೈಗಾರಿಕೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಲಾಕ್‌ಡೌನ್‌ನಿಂದ ಕೈಗಾರಿಕೆಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಶೇ.30 ರಷ್ಟು ಕೈಗಾರಿಕೆಗಳು ಮಾತ್ರ ಪ್ರಾರಂಭಗೊಂಡಿವೆ.
ಹೆಂಡ್ತಿನಾ ಕರ್ಕೊಂಡು ಬಾ ಅಂದ್ರೆ, ಕರೊನಾನೂ ಕರ್ಕೊಂಡ್‌ ಬಂದ ಬೆಂಗಳೂರಿನ ಈ ಯುವಕ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
