ಮೈಸೂರು:ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಜೆ ವೇಳೆಗೆ ಆಗಮಿಸಲಿದ್ದಾರೆ.
‘ಯೋಗ’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಲಿರುವ ಪಿಎಂ ಮೋದಿಗೆ ವಿಶೇಷ ಉಡುಗೊರೆ ನೀಡಲು ಆಭರಣ ವ್ಯಾಪಾರಿಗಳು ಮುಂದಾಗಿದ್ದಾರೆ. ನವರತ್ನ ಜ್ಯುವೆಲ್ಲರ್ಸ್ ವತಿಯಿಂದ ಸ್ವರ್ಣಾಕ್ಷರಗಳಲ್ಲಿ ಕೆತ್ತನೆ ಮಾಡಿರುವ ವಿಶೇಷ ಫೋಟೋವನ್ನು ಸಂಸದ ಪ್ರತಾಪ್ ಸಿಂಹ ಮೂಲಕ ಈ ನೆನಪಿನ ಕಾಣಿಕೆ ನೀಡಲಾಗುವುದು. ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಭಾವಚಿತ್ರವನ್ನು ಬಂಗಾರದಿಂದ ಕೆತ್ತನೆ ಮಾಡಲಾಗಿದೆ.
ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕವನ್ನ ಅಳವಡಿಕೆ ಮಾಡಲಾಗಿದೆ. ಥಾಯ್ಲೆಂಡ್​​​ನಲ್ಲಿ ಮಾಡಿಸಲಾಗಿರುವ ವಿಶೇಷ ಗಿಫ್ಟ್​ ಇದಾಗಿದ್ದು, ಮೈಸೂರಿಗರ ಪರವಾಗಿ ಯೋಗಕ್ಕೆ ಮೈಸೂರನ್ನ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ.
ಅಗ್ನಿಪಥ್ ವಿವಾದ; ಈ ರಾಜ್ಯದ 12 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಬಂದ್
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 15 =
Remember me
