ಬೆಂಗಳೂರು:ರಾಜ್ಯದ ಪ್ರತಿಷ್ಠಿತ ಸಾರ್ವಜನಿಕ ಉದ್ಯಮಗಳಲ್ಲಿ ಒಂದಾಗಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ಸದ್ಯಕ್ಕೆ ರೋಗಗ್ರಸ್ತವಾಗಿದೆ. ಹಲವು ವಲಯಗಳ ಕೂಗಿಗೆ ಓಗೊಟ್ಟಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪುನರಾರಂಭದ ಕಸರತ್ತಿಗೆ ಕೈಹಾಕಿದ್ದಾರೆ.
ಶಾಸಕ ಬಿ.ಕೆ.ಸಂಗಮೇಶ್ವರ, ಇಲಾಖೆ ಉನ್ನತಾಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಸಿ, ಒಟ್ಟಾರೆ ಕಾರ್ಖಾನೆ ಸಾಲದ ಮೊತ್ತ, ವಿದ್ಯುತ್ ಬಿಲ್, ಮುಂದಿನ ಹಾದಿ ಬಗ್ಗೆ ಚರ್ಚಿಸಿದರು. ಬಾಕಿ ಹೊರೆ ನಿಭಾಯಿಸಲು ಆರ್ಥಿಕ ಇಲಾಖೆ ಸಹಕಾರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜನಾಗ್ರಹದ ಮೇರೆಗೆ ಈ ಹಿಂದೆ ಖಾಸಗೀಕರಣದ ಪ್ರಯತ್ನ ಲಿಸಿಲ್ಲ. ಉನ್ನತಾಧಿಕಾರಿಗಳಮಟ್ಟದಲ್ಲಿ ಅಗತ್ಯವಾದ ಸಿದ್ಧತೆ, ಆರ್ಥಿಕ ಇಲಾಖೆ ಸಹಮತಿಯೊಂದಿಗೆ ಮತ್ತೊಮ್ಮೆ ಪ್ರಯತ್ನಿಸದರೆ ನಿರೀಕ್ಷಿತ ಲ ಸಿಗಲಿದೆ ಎಂಬ ವಿಶ್ವಾಸವು ಎಂ.ಬಿ.ಪಾಟೀಲ್ ಅವರದ್ದಾಗಿದೆ.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರಿಗಳ ಸಭೆ ನಡೆಸಬೇಕು. ಈ ಸಭೆಗೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನೂ ಕರೆದು ಚರ್ಚಿಸಬೇಕು ಎಂದು ಸೂಚಿಸಿದರು.
ಈ ಸಭೆಯ ನಂತರ ಕಾರ್ಖಾನೆ ಪುನರಾರಂಭದ ಮಾರ್ಗೋಪಾಯ, ಖಾಸಗೀಕರಣದ ರೂಪುರೇಷೆ ಅಂತಿಮಗೊಳಿಸಲು ಸಾಧ್ಯವಿದೆ. ಕಾರ್ಖಾನೆಗೆ ಹೇರಳ ಸಂಪನ್ಮೂಲವಿದ್ದು, ಸಮರ್ಪಕ ನಿರ್ವಹಣೆ ಹಾಗೂ ಬಳಕೆಯ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಕನಸಿನ ಕೂಸು ಈ ಕಾರ್ಖಾನೆ. 23 ಸಾವಿರ ಹೆಕ್ಟೇರ್ ಅರಣ್ಯ, ಅರಣ್ಯೇತರ ಜಮೀನಿದೆ. ಸದ್ಯಕ್ಕೆ ಅಕೇಶಿಯಾ, ನೀಲಗಿರಿ ಮತ್ತು ಬಿದಿರು ಬೆಳೆಯಲಾಗುತ್ತಿದೆ.
ಗುತ್ತಿಗೆ ನೀಡಿದರೂ ಕಾರ್ಖಾನೆಗೆ ಸೇರಿದ ಜಮೀನಿನಲ್ಲಿ ನಿಷೇಧಿತ ನೀಲಗಿರಿ ಬೆಳೆಯಲು ಅವಕಾಶ ನೀಡಬಹುದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಎಂ.ಬಿ.ಪಾಟೀಲ್ ನಿರ್ದೇಶಿಸಿದರು.
ಕಾರ್ಖಾನೆಯ ಉದ್ಯೋಗಿಗಳಿಗೆ ಸರ್ಕಾರದ ವಿವಿಧ ಸಂಸ್ಥೆ/ ನಿಗಮಗಳಲ್ಲಿ ಅವಕಾಶ ಕೊಡಿಸುವ ಪ್ರಯತ್ನ ಚಾಲ್ತಿಯಲ್ಲಿದೆ. ಆಸಕ್ತ ಕೆಲವರಿಗೆ ಸ್ವಯಂ ನಿವೃತ್ತಿ ನೀಡಲಾಗಿತ್ತು. ತಾತ್ಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ 250 ಾರೆಸ್ಟ್ ವಾಚರ್‌ಗಳ ವೇತನ ಏರಿಕೆಗೂ ಒಂದು ಪರಿಹಾರ ರೂಪಿಸಲು ತಿಳಿಸಿದರು.
ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ. ಜತೆಗೆ 229 ಕೋಟಿ ರೂ. ವಿದ್ಯುತ್ ಬಿಲ್ ಉಳಿಸಿಕೊಂಡಿದೆ. 2010ರಿಂದ ಈವರೆಗೆ 850 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಸಾಲದ ರೂಪದಲ್ಲಿ ನೀಡಿದೆ ಎಂದು ಸಭೆಗೆ ವಿವರಿಸಲಾಯಿತು.
ಸಿಎಸ್ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಿ, ನಿರ್ದಿಷ್ಟ ಕಾರ್ಯಚೌಕಟ್ಟು ಅಳವಡಿಸಿಕೊಂಡರೆ ಮುಂದಿನ ಹೆಜ್ಜೆಯಿರಿಸಲು ಅನುಕೂಲವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಕಿವಿಮಾತು ಹೇಳಿದರು. ಸಭೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಶಿವಮೊಗ್ಗ ಜಿಲ್ಲಾಧಿಕಾರಿಯೂ ಆದ ಎಂಪಿಎಂ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಎಪಿಸಿಸಿಎ್ ವನಶ್ರೀ ವಿಪಿನ್ ಸಿಂಗ್, ಸಿಒಒ ರವೀಂದ್ರನಾಥ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
