ಮೈಸೂರು:ಕರೊನಾ ನಿರ್ಮೂಲನೆಗೆ ಇಡೀ ವೈದ್ಯ ಜಗತ್ತು ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿದೆ. ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಹಗಲು-ರಾತ್ರಿ ಎನ್ನದೆ ಪ್ರಯೋಗ ನಡೆಸುತ್ತಲೇ ಇದ್ದಾರೆ. ವೈಜ್ಞಾನಿಕವಾಗಿ ಪರಿಹಾರ ಕಂಡುಹಿಡಿಯುವಲ್ಲಿ ಬಿಜಿಯಾಗಿದ್ದಾರೆ. ಇದರ ಬೆನ್ನಲ್ಲೇ ಮೂಢನಂಬಿಕೆ ಆಚರಣೆಯೂ ಸದ್ದು ಮಾಡುತ್ತಿದೆ.
ಹೌದು, ಕರೊನಾ ಹೆಸರಲ್ಲಿ ಮೌಢ್ಯಾಚರಣೆ ಶುರುವಾಗಿದೆ. ಮೈಸೂರಿನಲ್ಲಿ ರಾತ್ರೋರಾತ್ರಿ ರಾಕ್ಷಸಿ ಪೂಜೆ ನಡೆದಿದ್ದು, ರಕ್ತದ ಅನ್ನ ನೈವೇದ್ಯ ನೀಡಲಾಗಿದೆ!
ಇದನ್ನೂ ಓದಿರಿಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, ಚಿಕಿತ್ಸೆ ಸಿಗದೆ 7 ತಿಂಗಳ ಮಗು ಸಾವು
ಮೈಸೂರಿನ ಗಾಯತ್ರಿಪುರಂನ 2ನೇ ಹಂತದಲ್ಲಿ ಭಾನುವಾರ ತಡರಾತ್ರಿ ಸ್ಥಳೀಯರೆಲ್ಲ ಒಟ್ಟಾಗಿ ಬೃಹದಾಕಾರ ರಾಕ್ಷಸಿ ಚಿತ್ರ ಬಿಡಿಸಿ ಕೋಳಿಯನ್ನು ಬಲಿ ನೀಡಿದ್ದಾರೆ. ಕೋಳಿ ರಕ್ತದಿಂದ ಅನ್ನ ಮಾಡಿ ನೈವೇದ್ಯಕ್ಕಿಟ್ಟಿದ್ದಾರೆ. ರಕ್ತದ ಅನ್ನದ ಜತೆಗೆ ಬೂದಿ ಮಿಶ್ರಿತ ಮತ್ತು ಅರಿಶಿನದ ಅನ್ನವನ್ನು ರಾಕ್ಷಸಿಗೆ ಅರ್ಪಿಸಿ ಮಹಾಮಾರಿ ಕರೊನಾ ಸೋಂಕು ಬಾರದಿರಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಳಗ್ಗೆ ರಸ್ತೆಯಲ್ಲಿ ಓಡಾಡುವ ಜನರು ರಾಕ್ಷಸಿ ಚಿತ್ರ, ರಕ್ತದ ಕಲೆ ಕಂಡು ಭಯಗೊಂಡಿದ್ದಾರೆ. ಅಲ್ಲದೆ ಇಂದು ಭೀಮನ ಅಮಾವಾಸ್ಯೆ. ಹಾಗಾಗಿ ಯಾರೋ ವಾಮಾಚಾರ ಮಾಡಿರಬೇಕು ಎಂದು ಆತಂಕಗೊಂಡಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಮಲ್ಲಸಂದ್ರ ಗ್ರಾಮಸ್ಥರು ಕೂಡ ಕರೊನಾ ನಿರ್ಮೂಲನೆಗಾಗಿ ಅಜ್ಜಿ ಹಬ್ಬ ಆಚರಿಸಿದ್ದರು. ಜು.17ರಂದು ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಬೇವಿನ ಮರದಡಿ ಅಡಕೆ ಎಲೆಯಲ್ಲಿ ದೀಪ, ಬಳೆ, ಬಂಗಾರ, ಅರಿಶಿಣ, ಕುಂಕುಮ ಇಟ್ಟು, ಹೋಳಿಗೆ, ಮೊಸರನ್ನ ಎಡೆ ಹಾಕಿ ಮರಕ್ಕೆ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಬಹುದು.
ರಾತ್ರಿಯಿಡೀ ಆಟೋದಲ್ಲೇ ನರಳಾಡಿದ ತುಂಬುಗರ್ಭಿಣಿ, ಹೊಟ್ಟೆಯಲ್ಲೇ ಹಸುಗೂಸು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 9 =
Remember me
