ಬೆಂಗಳೂರು/ಮೈಸೂರು:ದೇಶದ ಸ್ವಚ್ಛ ಸರ್ವೆಕ್ಷಣ್-2020ರ ಅಭಿಯಾನದಲ್ಲಿ ಮೈಸೂರು 5, ತುಮಕೂರು 72 ಹಾಗೂ ಬೆಂಗಳೂರು 214ನೇ ಸ್ಥಾನ ಗಳಿಸಿವೆ. ಬೆಂಗಳೂರು ದೇಶದ ಅತ್ಯುತ್ತಮ ಸ್ವಯಂ ಸುಸ್ಥಿರ ಅಭಿವೃದ್ಧಿ ನಗರ ಗರಿಯನ್ನು ಮುಡಿಗೇರಿಸಿಕೊಂಡಿದೆ. ಒಟ್ಟಾರೆ ದೇಶದ 27 ರಾಜ್ಯಗಳಲ್ಲಿ ಸ್ವಚ್ಛತೆಯಲ್ಲಿ ಕರ್ನಾಟಕ 21ನೇ ಸ್ಥಾನ ಗಳಿಸಿದೆ.
ದೇಶದಲ್ಲಿ 2016ರಿಂದ ಸ್ವಚ್ಛ ಸವೇಕ್ಷಣ್ ಅಭಿಯಾನ ಆರಂಭವಾಗಿದ್ದು, ಮೊದಲ ಅವಧಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಮೈಸೂರು ಸತತ 5 ವರ್ಷಗಳ ಸರ್ವೆಕ್ಷಣೆಯಲ್ಲಿ ಅಗ್ರ 10ರೊಳಗೇ ಸ್ಥಾನ ಉಳಿಸಿಕೊಂಡಿದೆ. ಪ್ರಸ್ತುತ 2020ರ ಸರ್ವೆಕ್ಷಣೆಯಲ್ಲಿ ಇಂದೋರ್ ಪ್ರಥಮ, ಸೂರತ್ ದ್ವಿತೀಯ, ನವ ಮುಂಬೈ ತೃತೀಯ ಸ್ಥಾನ ಗಳಿಸಿವೆ. ಕಳೆದ ವರ್ಷ ಮೂರನೇ ಸ್ಥಾನ ಪಡೆದಿದ್ದ, ಮೈಸೂರು ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿದೆ. ಆದರೆ, 3ರಿಂದ 10 ಲಕ್ಷದೊಳಗಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ 5,298 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ದಕ್ಷಿಣ ವಲಯದಲ್ಲಿ ಪಿರಿಯಾಪಟ್ಟಣ ಪ್ರಥಮ: ದೇಶದ ದಕ್ಷಿಣ ವಲಯದ ರಾಜ್ಯಗಳ 25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಪಿರಿಯಾಪಟ್ಟಣ ಸ್ವಚ್ಛತಾ ನಗರ ಎಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಕೆ.ಆರ್. ನಗರ ದ್ವಿತೀಯ, ತಿ.ನರಸೀಪುರ ತೃತೀಯ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಐದನೇ ಸ್ಥಾನ ಪಡೆದುಕೊಂಡಿವೆ. ಇದೇ 25 ಸಾವಿರದೊಳಗಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ನಾಗರಿಕರ ಉತ್ತಮ ಪ್ರತಿಕ್ರಿಯೆ ಪಡೆದ ನಗರವಾಗಿ ಎಚ್.ಡಿ. ಕೋಟೆ, ಸ್ವಯಂ ಸುಸ್ಥಿರ ನಗರ ವಿಭಾಗದಲ್ಲಿ ಹೊಳಲ್ಕೆರೆ ಪ್ರಶಸ್ತಿ ಪಡೆದುಕೊಂಡಿವೆ.
ಸಿಲಿಕಾನ್ ಸಿಟಿಗೆ ಸ್ವಯಂ ಸುಸ್ಥಿರ ನಗರ
ಸರ್ವೆಕ್ಷಣೆಯಲ್ಲಿ ಕಳೆದ ವರ್ಷ 194ನೇ ಸ್ಥಾನ ಪಡೆದಿದ್ದ, ಬೆಂಗಳೂರು ಈ ವರ್ಷ ಕೇವಲ 2,656 ಅಂಕ ಗಳಿಸುವ ಮೂಲಕ 20 ಸ್ಥಾನ ಕುಸಿತಗೊಂಡು 214ನೇ ಸ್ಥಾನ ಪಡೆದಿದೆ. ಆದರೆ, ದೇಶದ ಅತ್ಯುತ್ತಮ ‘ಸ್ವಯಂ ಸುಸ್ಥಿರ ನಗರ’ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಇದಕ್ಕೆ ಮಾನದಂಡವಾಗಿದ್ದ ಬಯಲು ಶೌಚಮುಕ್ತ ನಗರ ನಿರ್ಮಾಣ ಹಾಗೂ ಮಾಹಿತಿ ನಿರ್ವಹಣಾ ವ್ಯವಸ್ಥೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ರಾಮನಗರ ಇನ್ನೋವೇಷನ್ ಸಿಟಿ
ದಕ್ಷಿಣ ವಲಯದ 50ರಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ರಾಮನಗರ ಹೊಸ ವಿಧಾನ ಅಳವಡಿಕೆ ಮತ್ತು ಉತ್ತಮ ಅಭ್ಯಾಸ (ಇನ್ನೋವೇಷನ್ ಆಂಡ್ ಬೆಸ್ಟ್ ಪ್ರ್ಯಾಕ್ಟಿಸಸ್) ನಗರಕ್ಕೆ ಭಾಜನವಾಗಿದೆ. ಇನ್ನು ಹುಣಸೂರು ನಾಗರಿಕರಿಂದ ಉತ್ತಮ ಮೆಚ್ಚುಗೆ ಪಡೆದ ನಗರವಾಗಿದೆ. 25ರಿಂದ 50ಸಾವಿರದೊಳಗಿನ ಜನಸಂಖ್ಯೆ ನಗರಗಳಲ್ಲಿ ಉತ್ತಮ ನಾಗರಿಕ ಮೆಚ್ಚುಗೆ ಪಡೆದ ನಗರವಾಗಿ ಕೆ.ಆರ್. ನಗರ ಮತ್ತು ಹೊಸ ಆವಿಷ್ಕಾರ ಮತ್ತು ಅಭ್ಯಾಸಗಳನ್ನು ಕೈಗೊಂಡ ನಗರವಾಗಿ ಕಡೂರು ಗುರುತಿಸಿಕೊಂಡಿದೆ.
4ನೇ ಬಾರಿ ಇಂದೋರ್ ಟಾಪರ್
ನವದೆಹಲಿ: ದೇಶದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿ ಸ್ವಚ್ಛ ಸರ್ವೆಕ್ಷಣಾ ಸಮೀಕ್ಷೆ-2020ರಲ್ಲಿ ಸತತ ನಾಲ್ಕನೇ ಬಾರಿಯೂ ಇಂದೋರ್ ನಗರ ಪ್ರಥಮ ಸ್ಥಾನ ಪಡೆದು ದಾಖಲೆ ಬರೆದಿದೆ. ಗುಜರಾತ್​ನ ಸೂರತ್ ಎರಡನೇ, ಮಹಾರಾಷ್ಟ್ರದ ನವಿಮುಂಬೈ ಮೂರನೇ ಸ್ಥಾನ ಪಡೆದಿದೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಮಾಹಿತಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸ್ವಚ್ಛ ಸರ್ವೆಕ್ಷಣಾ- 2020ರ ವಿವಿಧ ವಿಭಾಗಗಳಲ್ಲಿ ಅಗ್ರಸ್ಥಾನಗಳನ್ನು ಪಡೆದ ನಗರ-ಪಟ್ಟಣಗಳ ನಿವಾಸಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ದೇಶದ 129 ನಗರಗಳಿಗೆ ವಿವಿಧ ವಿಭಾಗಗಳಲ್ಲಿ ಶ್ರೇಯಾಂಕಗಳನ್ನು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಸರ್ವೆಕ್ಷಣಾ- 2020ರ ಮಾಹಿತಿ ಬಿಡುಗಡೆ ಮಾಡುತ್ತಾರೆ ಎಂದು ಈ ಮೊದಲು ಹೇಳಲಾಗಿತ್ತಾದರೂ ಅವರು ಭಾಗಿಯಾಗಿರಲಿಲ್ಲ. ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ ಆಪ್ ಹಾಗೂ ವಿವಿಧ ಜಾಲತಾಣಗಳ ಮೂಲಕ ಸುಮಾರು 11 ಕೋಟಿ ಜನ ಪಾಲ್ಗೊಂಡಿದ್ದರು. ರಾಜ್ಯವಾರು, ಜನಸಂಖ್ಯೆವಾರು, ಜನರ ಪಾಲ್ಗೊಳ್ಳುವಿಕೆ ಸೇರಿ ವಿವಿಧ ವಿಭಾಗಗಳಲ್ಲಿ ನಗರಗಳಿಗೆ ಶ್ರೇಯಾಂಕ ನೀಡಲಾಗುತ್ತದೆ. 100ಕ್ಕೂ ಹೆಚ್ಚು ನಗರಗಳನ್ನು ಹೊಂದಿರುವ ಸ್ವಚ್ಛ ರಾಜ್ಯ ಕೀರ್ತಿಗೆ ಛತ್ತೀಸ್​ಗಢ ಪಾತ್ರವಾಗಿದ್ದು, 100ಕ್ಕಿಂತ ಕಡಿಮೆ ನಗರಗಳನ್ನು ಹೊಂದಿರುವ ಸ್ವಚ್ಛ ರಾಜ್ಯ ಸ್ಥಾನ ಜಾರ್ಖಂಡ್ ಪಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
