ಮೈಸೂರು:ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್​ ನಾಲ್ವರಿಗೆ ಜೀವದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಚಂದನ್ ಮಲ್ಲಪ್ಪ(28) ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್. ಭಾನುವಾರ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಚಂದನ್‌ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಕೃತಕ ಉಸಿರಾಟದ ಬೆಂಬಲದೊಂದಿಗೆ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಚಂದನ್ ಮೃತಪಟ್ಟಿದ್ದಾರೆ.
ಇದನ್ನೂ ಓದಿರಿ:ಮಾರುಕಟ್ಟೆಗೆ ಬಂದ ಹಣ್ಣುಗಳ ರಾಜ, ಸ್ಥಳೀಯ ಮಾವುಗಳಷ್ಟೇ ಲಭ್ಯ, ದರ ಅಧಿಕ, ಬೇಡಿಕೆ ಕಡಿಮೆ
ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆಗೆ ದೇಹ ಸ್ಪಂದಿಸುವುದಿಲ್ಲ ಎಂಬುದು ವೈದ್ಯರಿಗೆ ಮೊದಲೇ ದೃಢಪಟ್ಟಿತ್ತು. ಮೆದುಳು ನಿಶ್ಕ್ರಿಯವಾಗಿದ್ದರಿಂದ ಸಂಬಂಧಿಕರಿಗೆ ವಿಷಯ ತಿಳಿಸಲಾಗಿತ್ತು.
ಬಳಿಕ ಚಂದನ್​ ಪಾಲಕರು ಹೃದಯ ನಾಳ, ಎರಡು ಕಿಡ್ನಿ ಹಾಗೂ ಒಂದು ಲಿವರ್ ದಾನ ಮಾಡಿದ್ದಾರೆ. ಒಂದು ಕಿಡ್ನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮತ್ತು ಹಾರ್ಟ್ಸ್ ವಾಲ್ಮ್ಸ್ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾನ ಮಾಡಲಾಗಿದೆ. ಈ ಮೂಲಕ ಚಂದನ್​ ಅವರು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.(ದಿಗ್ವಿಜಯ ನ್ಯೂಸ್​)
ಹಿಂದು ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾದ ಪಾಕ್​ ವ್ಯಕ್ತಿ: ಆದ್ರೆ ಸಂತ್ರಸ್ತೆ ಹೇಳಿದ್ದೇ ಬೇರೆ!

ಪಾಕ್​ಗೆ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ!

ಕಹಳೆ ಊದಿದ ಕೋಟಿಗೊಬ್ಬ: ಮಾರ್ಚ್​ 15 ರಿಂದ ಪ್ರಚಾರ ಪ್ರಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
