ಎನ್.ಆರ್.ಪುರ (ಚಿಕ್ಕಮಗಳೂರು ಜಿಲ್ಲೆ):ಇದು ವಿಕ್ಷಿಪ್ತ ಮನಸ್ಸಿನ ಯುವಕನೊಬ್ಬ ವಿಷಸೇವನೆ ಪ್ರಕರಣದ ನೈಜ ಕಥೆ.
28 ವರ್ಷದ ಈ ಯುವಕ ಮಂಗಳವಾರ ವಿಷ ಸೇವಿಸಿ ಎನ್.ಆರ್. ಪುರದ ರಸ್ತೆಯಲ್ಲಿ ಬಿದ್ದಿದ್ದ. ಸಾರ್ವಜನಿಕರು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಆತನ ಪೂರ್ವಾಪರ ವಿಚಾರಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ವಿಷದ ಪ್ರಮಾಣ ಹೆಚ್ಚಿರಲಿಲ್ಲವಾದ್ದರಿಂದ ಸಂಜೆ ವೇಳೆಗೆ ಚೇತರಿಸಿಕೊಂಡ. ಆದರೆ ಆತ ಕರೊನಾ ವೈರಸ್ ಸೋಂಕಿತ ಪ್ರಕರಣಗಳಿರುವ ಮೈಸೂರಿಂದ ಬಂದಿದ್ದಾನೆ ಎಂಬುದು ಪೊಲೀಸರಲ್ಲಿ ಆತಂಕ ಮೂಡಿಸಿತ್ತು. ಹಾಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲು ಕರೆದೊಯ್ಯಲು ನಿರ್ಧರಿಸಿದರು.
ಆದರೆ ಅದಕ್ಕೆ ಆತನ ಒಪ್ಪಿಗೆ ಇರಲಿಲ್ಲ. ಆ್ಯಂಬುಲೆನ್ಸ್ ಹತ್ತಿಸುವಾಗ ಹೇಗೋ ಪೊಲೀಸರ ಕಣ್ತಪ್ಪಿಸಿ ಓಡಿಹೋದ. ತಕ್ಷಣ ಬೆನ್ನತ್ತಿದ ಪೊಲೀಸರು ಆತನನ್ನು ಕರೆದುಕೊಂಡು ಬಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಐಸೋಲೇಷನ್ ವಾರ್ಡ್‌ಗೆ ಸೇರಿಸಿದ್ದಾರೆ.
ವೃತ್ತಿಯಿಂದ ಈತ ಡ್ರೈವರ್. ಮೈಸೂರಿನಿಂದ ನಡೆದುಕೊಂಡೇ ಸೋಮವಾರ ಎನ್.ಆರ್.ಪುರಕ್ಕೆ ಬಂದಿದ್ದ ಎಂಬ ಮಾಹಿತಿ ಇದೆ.
VIDEO| ಮರಿಗಳೊಂದಿಗೆ ರಸ್ತೆ ದಾಟುವುದನ್ನು ನೋಡಿಯೂ ಬಂದ ಬೈಕ್ ಸವಾರರ ವಿರುದ್ಧ ಕೆರಳಿದ ಆನೆ​: ಮೈನವಿರೇಳಿಸೋ ವಿಡಿಯೋ ಇದು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 5 =
Remember me
