ಮೈಸೂರು:ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೇ 28 ರಿಂದ ಜೂನ್​ 7ರ ಬೆಳಗ್ಗೆ 6 ಗಂಟೆಯವರೆಗೆ ಹೊಸ ನಿಯಮ ಜಾರಿಯಲ್ಲಿರಲಿದೆ.
ಮೈಸೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಸೋಮವಾರ ಮತ್ತು ಗುರುವಾರ ಎರಡು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಬ್ಯಾಂಕ್‌ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳಿಗೂ ಸಮಯ ನಿಗದಿಯಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಹಾಲಿನ ಬೂತ್‌ಗಳು, ವೈದ್ಯಕೀಯ ಸೇವೆಗಳು, ಹಾಪ್ ಕಾಮ್ಸ್ ಅಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ನ್ಯಾಯ ಬೆಲೆ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ.
ನಿಷೇದಾಜ್ಞೆ ಅವಧಿಯಲ್ಲಿ ಸರಕು ಸಗಟು ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಬೇರೆ ಯಾವುದೇ ವಾಹನ ಸಂಚಾರ, ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ-2005ರ ಉಪಬಂಧಗಳು, ಭಾರತೀಯ ದಂಡ ಸಂಹಿತೆಯ ಅನುಚ್ಛೇದ 188ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಕರೊನಾ ಮುಕ್ತ ಗ್ರಾಮಗಳುಮೈಸೂರು ಜಿಲ್ಲೆಯ 343 ಗ್ರಾಮಗಳು ಕರೊನಾ ಮುಕ್ತ ಎಂದು ಘೋಷಿಸಿ ಜಿಲ್ಲಾಡಳಿತ ಅಂಕಿ-ಅಂಶ ಬಿಡುಗಡೆ ಮಾಡಿದೆ. ಜಿಲ್ಲೆಯ 2560 ಗ್ರಾಮಗಳ ಪೈಕಿ 343 ಗ್ರಾಮಗಳಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ಇಲ್ಲ‌. ಜಿಲ್ಲೆಯ 247 ವಾರ್ಡ್‌ಗಳ ಪೈಕಿ 27 ವಾರ್ಡ್‌‌ಗಳಲ್ಲಿ ಶೂನ್ಯ ಕೋವಿಡ್ ಪ್ರಕರಣವಿದೆ.(ದಿಗ್ವಿಜಯ ನ್ಯೂಸ್​)
ಬಿರುಗಾಳಿ ಮಧ್ಯೆ ಹೊರಗ್ಯಾಕೆ ಬಂದಿದ್ದೀರಾ? ರಿಪೋರ್ಟರ್​ ಪ್ರಶ್ನೆಗೆ ಕಾಮನ್​ ಮ್ಯಾನ್​ ಕೊಟ್ಟ ಉತ್ತರ ವೈರಲ್​!

ಎಲೆಕ್ಟ್ರಿಕಲ್‌, ಸಿವಿಲ್‌ನಲ್ಲಿ ಡಿಪ್ಲೋಮಾ ಆಗಿದೆಯೆ? ಕೇಂದ್ರದ ಪವರ್‌ಗ್ರಿಡ್‌ನಿಂದ ಅರ್ಜಿ ಆಹ್ವಾನ

ಪತ್ನಿಗೆ ಕರೆ ಮಾಡಿದಾಗಲೆಲ್ಲ ಬಿಜಿ: ಮುಂದಾಗಿದ್ದು ದುರಂತ ಅಂತ್ಯ, ಮಕ್ಕಳ ಪ್ರಾಣವೂ ಹೋಯ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
