ಮೈಸೂರು:ಐತಿಹಾಸಿಕ ದಸರಾ ಕಾರ್ಯಕ್ರಮವನ್ನು ವೇದಿಕೆಯ ಮೇಲೆಇದ್ದ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದ ಜಯದೇವ ಹೃದ್ರೋಗ ಆಸ್ಪತ್ರೆ ಎಂಡಿ ಡಾ.ಸಿ.ಎನ್.ಮಂಜುನಾಥ್, ವೈದ್ಯಲೋಕಕ್ಕೆ ಸಂದ ಗೌರವ ಇದು ಎಂದರು.
ಮಾಸ್ಕ್ ಧರಿಸಿಕೊಂಡೇ ಭಾಷಣ ಆರಂಭಿಸಿದ ಡಾಕ್ಟರ್ ಮಂಜುನಾಥ್, ನಾಡಹಬ್ಬವನ್ನು ಉದ್ಘಾಟಿಸಲು ವೈದ್ಯರೊಬ್ಬರನ್ನು ಆಯ್ಕೆ ಮಾಡಿದ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಯವರಿಗೆ ಧನ್ಯವಾದಗಳು. ಇದು ಕರೊನಾ ವಾರಿಯರ್ಸ್ ಗೆ ಕೊಟ್ಟಿರು ಬಹುದೊಡ್ಡ ಗೌರವ. ನನ್ನ ಜೀವಿತಾವಧಿಯಲ್ಲಿ ಸಿಕ್ಕ ಅತಿದೊಡ್ಡ ಗೌರವ ಕೂಡ ಹೌದು. ಇದು ಅವಿಸ್ಮರಣೀಯ ಕ್ಷಣ ಎಂದು ಹೇಳಿದರು.
ಇದನ್ನೂ ಓದಿ:‘ಕಾವೇರಿ ಮಾತೆ ಮುನಿಸಿದ ಅನುಭವವಿದೆ ಸಾಕು, ಅಧಿಕಾರಿಗಳು ಇಷ್ಟಬಂದಂತೆ ನಡೆದರೆ ಹೇಗೆ?’
ನನ್ನ‌ ಪತ್ನಿ ಹಾಗೂ ಮಕ್ಕಳ ಹೇಳಿದ್ದಾರೆ. ನಮಗಾಗಿ ಏನೂ ಕೇಳಬೇಡಿ ಅಂತ. ಹಾಗಾಗಿ ನಾನು ಚಾಮುಂಡೇಶ್ವರಿ ದೇವಿಯಲ್ಲಿ ಮೂರು ವಿಚಾರ ಬೇಡಿಕೊಂಡೆ.1. ಕರೊನಾಗೆ ಶೀಘ್ರದಲ್ಲೇ ಲಸಿಕೆ ಸಿಗಬೇಕು.2.ಜಗತ್ತಿನಲ್ಲೇ ಕರೊನಾ ನಿವಾರಣೆಯಾಗಬೇಕು.3.ಜಲಪ್ರವಾಹ ನಿಲ್ಲಬೇಕು ಎಂದು ಪ್ರಾರ್ಥಿಸಿದ್ದೇನೆ. ದಸರಾ ಆರಂಭಿಸಿದ ಯದುವಂಶ ಜನರ ಅರಸರಾಗಿದ್ದರು. ಅಂತಹ ದಸರಾದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಎಂದು ಡಾಕ್ಟರ್ ಹೇಳಿದರು.
ಐತಿಹಾಸಿಕ ದಸಾರಕ್ಕೆ ಡಾ.ಮಂಜುನಾಥ್ ಚಾಲನೆ; ವಾರಿಯರ್ಸ್​ಗೆ ಸನ್ಮಾನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 15 =
Remember me
