ಮೈಸೂರು:ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಉಳಿಸಿಕೊಂಡಿದ್ದಾನೆ. ತೂಕ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಭೀಮ ಬಾರಿಯೂ ಎಲ್ಲರಿಗಿಂತ ಮುಂದಿದ್ದಾನೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಒಟ್ಟು 14 ಆನೆಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ:ಶತಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳಿಗೆ ವೇತನವಿಲ್ಲ!
ಸೆ. 6ರಂದು ಮೊದಲನೇ ಹಂತದ ಆನೆಗಳಿಗೆ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಅಭಿಮನ್ಯು 5160 ರಿಂದ 5300ಕೆಜಿಗೆ ತೂಕ ಏರಿಸಿಕೊಂಡಿದ್ದಾನೆ. ಭೀಮ 4370 ರಿಂದ 4685, ಮಹೇಂದ್ರ 4530 ರಿಂದ 4665, ಧನಂಜಯ 4940 ರಿಂದ 4990, ಗೋಪಿ 5080 ರಿಂದ 5145, ಕಂಜಾನ್​ 4240 ರಿಂದ 4395, ವಿಜಯಾ 2830 ರಿಂದ 2885 ಮತ್ತು ವರಲಕ್ಷ್ಮಿ 3020 ರಿಂದ 3170 ಕೆಜಿಗೆ ತೂಕ ಹೆಚ್ಚಿಸಿಕೊಂಡಿವೆ.
5685 ಕೆಜಿಯೊಂದಿಗೆ ಈ ಬಾರಿಯೂ ಅರ್ಜನನೇ ಮೊದಲ ಸ್ಥಾನದಲ್ಲಿದ್ದಾನೆ. 5300 ಕೆಜಿ ತೂಕದೊಂದಿಗೆ ಅಂಬಾರಿ ಹೊರುವ ಅಭಿಮನ್ಯು ಎರಡನೇ ಸ್ಥಾನದಲ್ಲಿದ್ದಾನೆ. ತೂಕ ಹೆಚ್ಚಿಸಿಕೊಳ್ಳವ ವಿಚಾರದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ. ಭೀಮ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
ದಸರಾ ಗಜಪಡೆಯ ತೂಕದ ವಿವರ1. ಅಭಿಮನ್ಯು – 5,3002. ವಿಜಯ – 2,8853. ಭೀಮ – 4,6854. ವರಲಕ್ಷ್ಮಿ – 3,1705. ಮಹೇಂದ್ರ – 46606. ಧನಂಜಯ – 4,9907. ಕಂಜನ್ – 4,3958. ಗೋಪಿ – 51459. ಹಿರಣ್ಯ – 291510. ರೋಹಿತ್ – 336011. ಸುಗ್ರೀವ – 503512. ಪ್ರಶಾಂತ್ – 497013. ಲಕ್ಷ್ಮಿ – 323514. ಅರ್ಜುನ – 5680

ವೆಡ್ಡಿಂಗ್​​​​​ ಹಾಲ್​​ನಲ್ಲಿ ಅಗ್ನಿ ಅವಘಡ: 100 ಮಂದಿ ಸಾವು, 150ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಮಂಡ್ಯದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
