ಮೈಸೂರು:ರೋಹಿಣಿ ಸಿಂಧೂರಿ ಐಎಎಸ್‌ ಪಾಸ್ ಮಾಡಿದ್ದಾರಾ? ಅನ್ನೋದೆ ನನಗೆ ಡೌಟು. ಬೇಸಿಕ್ ನಾಲೆಡ್ಜ್ ಇಲ್ಲದ ಐಎಎಸ್ ಅಧಿಕಾರಿ ಎಂದು ಎಂಎಲ್‌ಸಿ ರಘು ಆಚಾರ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಹುಣಸೂರು ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಚ್​.ಪಿ. ಮಂಜುನಾಥ್ ನಡುವಿನ ಆರೋಪ-ಪ್ರತ್ಯಾರೋಪ ಸಮರ ತಾರಕಕ್ಕೇರಿದೆ. ಆರಂಭದಲ್ಲಿ ಶಾಸಕ ಮಂಜುನಾಥ್​ ಮೈಸೂರಿಗೆ ಇಬ್ಬರು ಮಹಾರಾಣಿಯರಿದ್ದಾರೆ, ಮೂರನೇಯವರ ಅವಶ್ಯಕತೆ ಇಲ್ಲವೆಂದು ಡಿಸಿ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ, ಪತ್ರದ ಮೂಲಕ ತಿರುಗೇಟು ನೀಡಿದ್ದರು. ಅಲ್ಲದೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಡಿಸಿಯನ್ನು ಹಿಟ್ಲರ್‌ಗೆ ಹೋಲಿಸಿ ವಾಗ್ದಾಳಿ ನಡೆಸಿದರು. ನಾನೂ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಿಮ್ಮ ವೈಯಕ್ತಿಕ ವಿಚಾರ ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದರು. ಶಾಸಕರ ಆಕ್ರೋಶಕ್ಕೆ ಧ್ವನಿಗೂಡಿಸಿರುವ ಎಂಎಲ್‌ಸಿ ರಘು ಆಚಾರ್, ಡಿಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕಾಂಗ ಶಾಸನ ರೂಪಿಸುತ್ತೆ, ಶಾಸನಗಳನ್ನ ಕಾರ್ಯ ರೂಪಕ್ಕೆ ತರೋದು ಕಾರ್ಯಾಂಗ. ಇದು ಆಗದಿದ್ದಲ್ಲಿ ನ್ಯಾಯಾಂಗಕ್ಕೆ ಹೋಗಬೇಕು. ಶಾಸಕರಿಗೆ ಪತ್ರ ತಲುಪುವ ಮುನ್ನವೇ ಸೋಷಿಯಲ್ ಮೀಡಿಯಾಗೆ ಹೇಗೆ ಹೋಯ್ತು? ನಿಮ್ಮ ಕಚೇರಿ ಸಿಬ್ಬಂದಿಯಿಂದ ಹೋಯ್ತ? ಅಥವಾ ಹೇಗೆ ಹೋಯ್ತು? ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೂಡಲೇ ಶಾಸಕರ ಕ್ಷಮೆ ಕೇಳಬೇಕು. ಇನ್ನು ಮೂರು ದಿನದಲ್ಲಿ ಅಪಾಲಜಿ ಕೇಳದಿದ್ರೆ ಹಕ್ಕುಚ್ಯುತಿ ಮಂಡಿಸುತ್ತೇವೆ. ಇದು ಶಾಸಕ ಮಂಜುನಾಥ್‌ಗೆ ಮಾಡಿದ ಅವಮಾನವಲ್ಲ. ಶಾಸಕರಿಗೆ ಮಾಡಿದ ಅವಮಾನ ಎಂದು ರಘು ಆಚಾರ್ ಕಿಡಿಕಾರಿದರು.
ಕೌನ್ಸಿಲ್‌ಗೆ ಬಂದು ಉತ್ತರ ಕೊಡಲಿ ಪ್ರಿವಿಲೇಜ್ ಮೂವ್ ಮಾಡ್ತೀನಿ. ಜನಪ್ರತಿನಿಧಿಗಳು ಅಂದ್ರೆ ಕಂಡಮ್ ಮಾಡ್ಕೊಂಡಿದ್ದೀರಾ? ನನಗೆ ಅನುಮಾನ… ನೀವು ಐಎಎಸ್ ಪಾಸ್ ಮಾಡಿಕೊಂಡಿಲ್ಲ‌ ಎಂದೆಲ್ಲ ಕಟುವಾಗಿ ಟೀಕಿಸಿದರು.
ನನಗೂ ತಾಯಿ, ಹೆಂಡತಿ, ಮಗಳಿದ್ದಾರೆ, ನಾನು ಆ ಮಟ್ಟಕ್ಕೆ ಹೋಗಲ್ಲ: ಡಿಸಿ ವಿರುದ್ಧ ಶಾಸಕರ ವಾಗ್ದಾಳಿ!

ಮಹಾರಾಣಿ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್​ ಶಾಸಕನಿಗೆ ರೋಹಿಣಿ ಸಿಂಧೂರಿ ಟಾಂಗ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
