ಮೈಸೂರು:ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್​ ಬಳಿಕ ಮೈಸೂರಿನಲ್ಲಿ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ವರ್ಗಾವಣೆ ಮಾಡಲಾಗಿದೆ.
ಡಿಎಚ್​ಒ ಅಮರನಾಥ್​ ಅವರು ನಿರಾಸಕ್ತಿಯಿಂದ ಟಾರ್ಗೆಟ್ ಆಗಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ ಸಭೆಯಲ್ಲಿ ಡಿಎಚ್‌ಒಗೆ ತರಾಟೆಗೆ ತೆಗೆದುಕೊಂಡಿದ್ದರು.
ತಾಲೂಕುವಾರು ಕರೊನಾ ಔಷಧಿ ಹಂಚಿಕೆ ವಿಚಾರದಲ್ಲೂ ತಪ್ಪು ಮಾಹಿತಿ ನೀಡಿದ್ದರು.‌ ಈ ಬಗ್ಗೆ ಜಿಲ್ಲೆಯ ಬಹುತೇಕ ಎಲ್ಲ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ಡಿಎಚ್‌ಒ ಆಗಿ ಡಾ.ಪ್ರಸಾದ್ ನೇಮಕ ಮಾಡಲಾಗಿದೆ. ಪ್ರಸಾದ್​ ಅವರು ಈ ಹಿಂದೆ ಚಾಮರಾಜನಗರ ಡಿಎಚ್‌ಒ ಆಗಿದ್ದರು. ಅಧಿಕೃತ ಆದೇಶವಷ್ಟೇ ಬಾಕಿ ಇದೆ.(ದಿಗ್ವಿಜಯ ನ್ಯೂಸ್​)
ಕುಡಿಯಲು ಮದ್ಯ ಸಿಗದಿದ್ದಕ್ಕೆ ಕಾಲನ್ನೇ ಕತ್ತರಿಸಿಕೊಂಡ ಭೂಪ..!

ಕೆಆರ್​ಎಸ್​ ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ: ರೈತರ ಮುಖದಲ್ಲಿ ಮಂದಹಾಸ

ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆಗೆ ವಂಚಿಸಲು ಯತ್ನ: ಕ್ರೆಡಿಟ್​ ಕಾರ್ಡ್​ ಮಾಹಿತಿಗಾಗಿ ಮಹಿಳೆಯಿಂದ ಕರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
