ಮೈಸೂರು:ಆತ್ಮಹತ್ಯೆ ಮಾಡಿಕೊಂಡ ಮಗನ ಮೃತದೇಹವನ್ನು ಪಡೆಯಲು ತಂದೆ ನಿರಾಕರಿಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ನಾಲ್ಕು ದಿನಗಳ ಹಿಂದೆ ಜೆಪಿ ನಗರದ ನಿವಾಸದಲ್ಲಿ ಪ್ರವೀಣ್​ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರವೀಣ್​ ಮಾದಕ ವ್ಯಸನಿಯಾಗಿದ್ದ. ಈ ವಿಚಾರವನ್ನು ಮುಚ್ಚಿಟ್ಟು ಒಂದೂವರೆ ವರ್ಷದ ಹಿಂದೆ ಪ್ರವೀಣ್‌ಗೆ ಮದುವೆ ಮಾಡಿಕೊಡಲಾಗಿತ್ತು. ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದ ಪ್ರವೀಣ್ ಮದುವೆ ನಂತರ ಚಟಗಳನ್ನು ಬಿಟ್ಟಿದ್ದ.
ಇದನ್ನೂ ಓದಿರಿ:ಮಗ-ಸೊಸೆ ಮಲಗಿದ್ದ ಕೋಣೆಯಲ್ಲಿ ಕೇಳಿತು ಭಾರೀ ಶಬ್ದ: ಎದ್ದು ನೋಡಿದ ತಂದೆ-ತಾಯಿಗೆ ಕಾದಿತ್ತು ಶಾಕ್​!
ಇದರ ನಡುವೆ 6 ತಿಂಗಳ ಹಿಂದೆ ಪ್ರವೀಣ್​ ಪತ್ನಿ ಬಾಣಂತನಕ್ಕೆಂದು ತವರು ಮನೆಗೆ ಹೋಗಿದ್ದಳು. ಪತ್ನಿ ಇಲ್ಲದ ವೇಳೆ ಪ್ರವೀಣ್‌ಗೆ ತಂದೆ ರಾಘವ, ಅಣ್ಣ ಗೋವರ್ಧನ್ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಪ್ರವೀಣ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ಕು ದಿನದಿಂದ ಶವಾಗಾರದಲ್ಲಿರುವ ಪ್ರವೀಣ್ ಮೃತದೇಹವನ್ನು ಪಡೆಯಲು ತಂದೆ ಮುಂದೆ ಬಂದಿಲ್ಲ. ಮೃತದೇಹ ಪಡೆದರೆ ಪ್ರವೀಣ್ ಪತ್ನಿ ಹಾಗೂ ಮಗುವಿಗೆ ಆಸ್ತಿ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ತಂದೆ ಮೃತದೇಹ ಪಡೆದಿಲ್ಲ. ಇದೀಗ ನ್ಯಾಯ ಕೊಡಿಸುವಂತೆ ಪತ್ನಿ ಭೂಮಿಕಾ ಹಾಗೂ ಪೋಷಕರು ಠಾಣೆಯ ಮೆಟ್ಟಿಲೇರಿದ್ದಾರೆ.(ದಿಗ್ವಿಜಯ ನ್ಯೂಸ್​)
ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

ಹೆಣ್ಣೇ ಕೊಡಲ್ಲಾ ಅಂತಾರ್ರಿ… ಏನಾದ್ರೊಂದು ಯೋಜನೆ ತಂದಾದ್ರೂ ನನ್ನಂಥವ್ರಿಗೆ ಮದ್ವೆ ಮಾಡಿಸ್ರಿ ಸಾಹೇಬ್ರೆ…

‘ನಾನು ಸಾಯುತ್ತಿದ್ದೇನೆ, ಕ್ಷಮಿಸಿ… ಸಿದ್ದರಾಮಯ್ಯ ಸರ್‌, ಯಶ್‌ ಅಣ್ಣ ಪ್ಲೀಸ್‌ ನನ್ನ ಈ ಅಂತಿಮ ಇಚ್ಛೆ ಈಡೇರಿಸಿ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
