ಮೈಸೂರು:ಬೇಯುತ್ತಿದ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾದ ನಿಗೂಢ ಪ್ರಕರಣವನ್ನು ಭೇದಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಂಜನಗೂಡು ತಾಲೂಕು ಕರಳಪುರ ಗ್ರಾಮದ ಸಿದ್ದರಾಜು ಬಂಧಿತ ಆರೋಪಿ. ಸಿದ್ದರಾಜುಗೆ ಸಾಥ್​ ನೀಡಿದ ನಂಜನಗೂಡು ಚಾಮಲಾಪುರ ಹುಂಡಿಯ ಸ್ನೇಹಿತ ಪ್ರಸನ್ನ ಕುಮಾರ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಜಾಹೀರಾತು ನೋಡಿ ಕಾಲ್​ಗರ್ಲ್​ಗೆ ಕರೆ ಮಾಡಿದ: ಮನೆಗೆ ಬಂದ ಯುವತಿಯಿಂದ ಕಾದಿತ್ತು ಶಾಕ್!​​
ಹೊತ್ತಿ ಉರಿಯುವ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವತಿ ಶವದ ಬಗ್ಗೆಯೂ ಮಾಹಿತಿ ದೊರೆತಿದ್ದು, ಕೊಲೆಯಾದವಳನ್ನು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಭಾಗ್ಯ (18) ಎಂದು ಗುರುತಿಸಲಾಗಿದೆ. ಅಕ್ಟೋಬರ್ 8ರಂದು ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ರಸ್ತೆ ಬದಿಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಭಾಗ್ಯಳ ಶವ ಪತ್ತೆಯಾಗಿತ್ತು.
ಹುಲ್ಲಹಳ್ಳಿಯಲ್ಲಿ ವಕೀಲರೊಬ್ಬರ ಕಚೇರಿಯಲ್ಲಿ ಭಾಗ್ಯ ಟೈಪಿಸ್ಟ್ ಕೆಲಸ ಮಾಡುತ್ತಿದ್ದಳು. ಆರೋಪಿ ಸಿದ್ದರಾಜು ಹಾಗೂ ಭಾಗ್ಯ ಪರಸ್ಪರ ಪ್ರೀತಿಸುತ್ತಿದ್ದರು. ದಿನಗಳು ಕಳೆದಂತೆ ಮದುವೆ ಆಗುವಂತೆ ಭಾಗ್ಯ, ಸಿದ್ದರಾಜುಗೆ ಒತ್ತಡ ಹಾಕಲು ಆರಂಭಿಸಿದಳು. ಆದರೆ, ಸಿದ್ದರಾಜುವಿಗೆ ಮದುವೆ ಇಷ್ಟವಿರಲಿಲ್ಲ. ಸಾಕಷ್ಟು ಒತ್ತಡ ಮಾಡುತ್ತಿದ್ದ ಭಾಗ್ಯಳನ್ನು ಕೊಲ್ಲಲು ಸಿದ್ದರಾಜು ಸಂಚು ರೂಪಿಸಿದ್ದ.
ಅದರಂತೆಯೇ ಶನಿವಾರ (ಅ.7) ಮಧ್ಯಾಹ್ನ ಭಾಗ್ಯಳನ್ನು ಸಿದ್ದರಾಜು ಕಾರಿನಲ್ಲಿ ಕರೆದೊಯ್ದಿದ್ದ. ಆರೋಪಿ ಹಾಗೂ ಭಾಗ್ಯ ಜತೆ ಸ್ನೇಹಿತ ಪ್ರಸನ್ನ ಕುಮಾರ್ ಸಹ ತೆರಳಿದ್ದ. ಬಳಿಕ ಸಿದ್ದರಾಜು ಭಾಗ್ಯಳ ಮೇಲೆ ಅತ್ಯಾಚಾರ ಮಾಡಿ, ಕೊಲೆಗೈದು ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದ.
ಇದನ್ನೂ ಓದಿ:VIDEO| ಗಾಳಿಯ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವಿರಮ್ಮ: ಚಿಕ್ಕಮಗಳೂರಿನಲ್ಲಿ ಪವಾಡ!
ಮಗಳು ಮನೆಗೆ ಬರದಿದ್ದನ್ನು ನೋಡಿ ಗಾಬರಿಗೊಂಡ ಭಾಗ್ಯ ತಂದೆ ಮಹದೇವಶೆಟ್ಟಿ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಭಾಗ್ಯಳ ಮೊಬೈಲ್ ಟವರ್ ಜಾಡು ಹಿಡಿದ ಪೊಲೀಸರಿಗೆ ಪಿರಿಯಾಪಟ್ಟಣದ ಲೊಕೇಶನ್ ಸೂಚಿಸಿತ್ತು. ಬಳಿಕ ಹುಲ್ಲಹಳ್ಳಿ ಪೊಲೀಸರು ಪಿರಿಯಾಪಟ್ಟಣ ಪೊಲೀಸರ ಸಂಪರ್ಕದಲ್ಲಿದ್ದರು.​ ಇದರ ನಡುವೆ ಭಾಗ್ಯಳ ಶವ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆ ಧರಿಸಿದ್ದ ಬಟ್ಟೆ ಮತ್ತು ಕಾಲು ಗೆಜ್ಜೆಯಿಂದ ಗುರುತು ಪತ್ತೆಹಚ್ಚಲಾಯಿತು. ಇದೀಗ ಆರೋಪಿ ಸಿದ್ದರಾಜವನ್ನು ಬಂಧಿಸಲಾಗಿದ್ದು, ಸ್ನೇಹಿತನಿಗಾಗಿ ಬಲೆ ಬೀಸಲಾಗಿದೆ.(ದಿಗ್ವಿಜಯ ನ್ಯೂಸ್​)
VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
