ಮೈಸೂರು:ಮಹಾಮಾರಿ ಕರೊನಾ ವೈರಸ್​ 3ನೇ ಅಲೆ ಮಾತ್ರವಲ್ಲ 5 ರಿಂದ 7 ಅಲೆಗಳು ಬರಲಿದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್​ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲಿ ಲಸಿಕೆ ನೀಡುವಿಕೆ ಹಾಗೂ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಒತ್ತು ನೀಡಿ. ಲಸಿಕೆ ಸಿಗದ ಕಾರಣ ಜನ ಆತಂಕಕ್ಕೆ ಸಿಲುಕಿದ್ದಾರೆ. ನಂಜನಗೂಡಿನಲ್ಲಿ ಲಸಿಕೆ ನೀಡುವಿಕೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ಕರೊನಾ ಕೇವಲ 3 ಅಲೆಗೆ ನಿಲ್ಲಲ್ಲ. ಈಗಾಗಲೇ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಮಕ್ಕಳಲ್ಲಿ ಇಮ್ಯೂನಿಟಿ ಇರುವುದರಿಂದ ಚೇತರಿಸಿಕೊಂಡಿದ್ದಾರೆ. ಈ ವರ್ಷದಲ್ಲಿ ಶೇ 65 ರಷ್ಟು ಮಂದಿಗೆ ಲಸಿಕೆ ನೀಡಬೇಕಿತ್ತು. ಮಳೆಗಾಲ ಬರುವುದರಿಂದ ಮಕ್ಕಳಲ್ಲಿ ಅಸ್ತಮ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದರು.
ವ್ಯಾಕ್ಸಿನೇಷನ್ ತರಿಸಿಕೊಳ್ಳಲು ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ. ಸಂಬಂಧಪಟ್ಟ ಕಂಪನಿಗಳ ಜತೆ ಮಾತುಕತೆ ನಡೆಸಿ ಕಾರ್ಯರೂಪಕ್ಕೆ ತರಬೇಕಿದೆ. ವ್ಯಾಕ್ಸಿನೇಷನ್ ಪೂರೈಕೆಗೆ ಒತ್ತು ನೀಡಿ ಜತೆಗೆ ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಬೇಕು ಎಂದು ಹೇಳುತ್ತಾ ತಮ್ಮ ಸರ್ಕಾರದ ವಿರುದ್ಧವೇ ಶಾಸಕ ಹರ್ಷವರ್ಧನ್ ಅಸಮಾಧಾನ ಹೊರಹಾಕಿದರು.(ದಿಗ್ವಿಜಯ ನ್ಯೂಸ್​)
ಕಾನ್ಸ್​ಟೇಬಲ್​ ಜತೆ ಅಕ್ರಮ ಸಂಬಂಧ: ಮಹಿಳೆಯ ಸೇಡಿಗೆ ಬೆಚ್ಚಿಬಿದ್ದ ಪೇದೆಯ ಕುಟುಂಬ!

ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

ಪತ್ನಿಗೆ 1 ಕೆಜಿ ಚಿನ್ನದ ತಾಳಿ ಉಡುಗೊರೆ! ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − sixteen =
Remember me
