ಮೈಸೂರು: ವಿವಾಹಿತ ಯುವಕ ಹಾಗೂ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಕಪಿಲಾ ಸೇತುವೆ ಬಳಿ ನಡೆದಿದೆ.
ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಮಣಿಕಂಠ(28) ಹಾಗೂ ಅದೇ ತಾಲೂಕಿನ ಆಲಹಳ್ಳಿ ನಿವಾಸಿ ವಸಂತ(29) ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಸಂಬಂಧಿಗಳು ಎನ್ನಲಾಗಿದೆ.
ಮಣಿಕಂಠ ಅವರು ವಿವಾಹಿತರಾಗಿದ್ದು, ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಸಂತ ಅವರು ಮಣಿಕಂಠನ ಸೋದರ ಸಂಬಂಧಿಯಾಗಿದ್ದು, ಉದ್ಯೋಗ ಹರಸಿ ಸಂದರ್ಶನಕ್ಕೆಂದು ಮೈಸೂರಿಗೆ ಆಗಮಿಸಿದ್ದರು. ಮಣಿಕಂಠ ಅವರ ಮನೆಯಲ್ಲಿ ವಸಂತ ತಂಗಿದ್ದರು. ಶುಕ್ರವಾರ ಬೆಳಗ್ಗೆ ವಸಂತ ಅವರನ್ನು ಉದ್ಯೋಗದ ಸಂದರ್ಶನಕ್ಕೆಂದು ಮಣಿಕಂಠ ಕರೆದು ಹೋಗಿದ್ದರು. ಬಳಿಕ ಅವರು ಬಲಮುರಿಗೆ ತೆರಳಿದ್ದರು ಎನ್ನಲಾಗಿದ್ದು ಮನೆಗೆ ಬಂದಿರಲಿಲ್ಲ. ಆದರೆ ಅವರು ಪಟ್ಟಣದ ಕಬಿನಿ ಸೇತುವೆ ಬಳಿ ಬೈಕ್ ನಿಲ್ಲಿಸಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಶವಗಳು ಶನಿವಾರ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.
ಮೃತ ಮಣಿಕಂಠನ ಪತ್ನಿ ಜ್ಯೋತಿ ಅವರು ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದ ಪಿಎಸ್​ಐ ತಿರುಮಲೇಶ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಯ ಪ್ರಭಾರ ನಿರೀಕ್ಷಕ ಆನಂದ್ ಕುಮಾರ್ ಅವರು ತನಿಖೆ ಕೈಗೊಂಡಿದ್ದಾರೆ.
‘ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ’ ಪೋಸ್ಟರ್​ ಹಾಕಿ ಸರ್ಕಾರವನ್ನ ಅಣಕಿಸಿದ ಕಾಂಗ್ರೆಸ್​! 100% ಹುದ್ದೆ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್…

ಮಂಗಳಮುಖಿಯಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡ ಬಂಟ್ವಾಳ ಮೂಲದ ಮುಸ್ಲಿಂ ಯುವಕ! ಆಡಿಯೋ ವೈರಲ್​ ಬೆನ್ನಲ್ಲೇ ಆಘಾತಕಾರಿ ವಿಷಯ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 8 =
Remember me
