ಮೈಸೂರು:ಕತ್ತಲು ಕವಿಯುವ ಸಮಯದಲ್ಲಿ ದಟ್ಟ ಬೆಳಕನ್ನು ಕಂಡು ಗ್ರಾಮಸ್ಥರು ಚಕಿತಗೊಂಡ ಘಟನೆ ಜಿಲ್ಲೆಯ ಕೆ.ಆರ್​.ನಗರ ತಾಲೂಕಿನ ಬಟಿಗನಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ:‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ
ಬಟಿಗನಹಳ್ಳಿ ಕೆ.ಆರ್.ನಗರ ತಾಲೂಕಿನಿಂದ 20 ಕಿ.ಮೀ. ದೂರದಲ್ಲಿದ್ದು, ಇಂದು ರಾತ್ರಿ 7 ಗಂಟೆಯಲ್ಲಿ ಪ್ರಖರವಾದ ಬೆಳಕು ಕಂಡು ಗ್ರಾಮಸ್ಥರು ವಿಸ್ಮಿತರಾದರು. ಬೀದಿ ದೀಪಗಳನ್ನು ಹಾಕಿದ ನಂತರವೂ ಬೆಳಕಿನ ಕಿರಣಗಳು ಗ್ರಾಮದಲ್ಲಿತ್ತು.
ನಿನ್ನೆಯಷ್ಟೇ ಮಂಡ್ಯದ ಕೆ.ಆರ್​.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲೂ ಸಹ ರಾತ್ರಿ 7.30ರ ಸಮಯದಲ್ಲಿ ದಿಢೀರ್​ ಬೆಳಕು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಹಗಲಿನ ವಾತವಾರಣ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದರು.
ಇದನ್ನೂ ಓದಿ:ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು 70 ಸಾವಿರ ರೂ. ಖರ್ಚು ಮಾಡಿ ವಿಮಾನ ಟಿಕೆಟ್​ ಖರೀದಿಸಿದ ರೈತ!
ಆದರೆ, ರಾತ್ರಿ ವೇಳೆ ಬೆಳಕು ಯಾಕೆ ಬಂತು ಎಂಬುದರ ಬಗ್ಗೆ ಈವರೆಗೂ ಸ್ಪಷ್ಟನೆ ಇಲ್ಲ. ಪೂರ್ವ ಮುಂಗಾರು ಮಳೆ ಸಮಯದಲ್ಲಿ ಈ ರೀತಿಯಾಗುವುದು ಸಹಜ ಎಂದು ಗ್ರಾಮಸ್ಥರು ಹೇಳಿದ್ದು, ಪ್ರಕರಣ ಮಾತ್ರ ನಿಗೂಢವಾಗಿಯೇ ಉಳಿದಿದೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/582628132664095/

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × three =
Remember me
