ಮೈಸೂರು:ಆಸೆಗೆ ಬಿದ್ದು ಒಂದು ಕ್ಷಣ ಮೈಮರೆತರೆ ಮುಂದೆ ಪಶ್ಚತಾಪ ಪಡಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ರಸ್ತೆಯಲ್ಲಿ ಬಿದ್ದಿದ್ದ 500 ರೂ. ತೆಗೆದುಕೊಳ್ಳಲು ಹೋದ ವ್ಯಕ್ತಿ 1.50 ಲಕ್ಷ ರೂ. ಕಳೆದುಕೊಂಡು ಇದೀಗ ಯಾತನೆ ಅನುಭವಿಸುತ್ತಿದ್ದಾರೆ.
ಈ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಕಲ್ಕುಣಿಕೆ ಗ್ರಾಮದ ನಿವಾಸಿ ಗಣೇಶ್​, ಡೆಪಾಸಿಟ್​ ಮಾಡಿದ್ದ 1.50 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಬರಲು ಬ್ಯಾಂಕ್​ಗೆ ಹೋಗಿದ್ದರು.
ಇದನ್ನೂ ಓದಿರಿ:ಪ್ರೇಕ್ಷಾ ಆತ್ಮಹತ್ಯೆ ಕೇಸ್​: ಲವ್ವರ್​ ಜತೆಗಿನ ಸಂಭಾಷಣೆ ಆಡಿಯೋದಲ್ಲಿದೆ ಸ್ಫೋಟಕ ಮಾಹಿತಿ!
ಹಣವನ್ನು ಡ್ರಾ ಮಾಡಿದ ಬಳಿಕ ಕೆಲಸ ನಿಮಿತ್ತ ಹತ್ತಿರದ ಪೋಸ್ಟ್​ ಆಫೀಸ್​ಗೆ​ ತೆರಳಿದ್ದಾರೆ. ಈ ವೇಳೆ ಗಣೇಶ್​ರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ. ಪೋಸ್ಟ್​ ಆಫೀಸ್​ನಲ್ಲಿ ಕೆಲಸ ಮುಗಿಸಿದ ಗಣೇಶ್,​ ದಾರಿ ಮಧ್ಯೆ ಶ್ರೀ ಹೋಟೆಲ್​ನಲ್ಲಿ ಟೀ ಕುಡಿದು ಹೋಗುವಾಗ ರಸ್ತೆ ಮೇಲೆ 500 ಎಸೆದ ದುಷ್ಕರ್ಮಿಗಳು, ಈ ಹಣ ನಿಮ್ಮದೇನಾ? ಎಂದಿದ್ದಾರೆ.
ಈ ವೇಳೆ ಗಣೇಶ್​ 500 ರೂ. ನೋಟನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಅವರ ಬಳಿಯಿದ್ದ ಹಣದ ಬ್ಯಾಗ್​ ಕಸಿದು ದುಷ್ಕರ್ಮಿಗಳು ಅಲ್ಲಿಂದ ಬೈಕ್​ ಏರಿ ಪರಾರಿಯಾಗಿದ್ದಾರೆ. ತಕ್ಷಣ ಗಣೇಶ್​ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.
ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…

ಬ್ಯಾಂಕ್​ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!

ಬಾಕ್ಸ್​ ಆಫೀಸ್​ ಸುಲ್ತಾನನೆಂಬುದು ಮತ್ತೆ ಸಾಬೀತು: ಮೊದಲ ದಿನವೇ ಸ್ಯಾಂಡಲ್​ವುಡ್​ ದಾಖಲೆ ಮುರಿದ ಡಿ ಬಾಸ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
