ಮೈಸೂರು:ಅತ್ತೆ ಮತ್ತು ಸೊಸೆಯ ನಡುವಿನ ಗಲಾಟೆ ಸೊಸೆಯ ಸಾವಿನಲ್ಲಿ ಅಂತ್ಯವಾಗಿರುವ ದುರಂತ ಘಟನೆ ತಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.
ಕಾವ್ಯಾ (21) ಮೃತ ದುರ್ದೈವಿ. ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಕಾವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೆ ಅತ್ತೆಯೇ ಕಾರಣ ಎಂದು ಸಾವಿಗೂ ಮುನ್ನ ಕಾವ್ಯಾ ಹೇಳಿಕೆ ನೀಡಿದ್ದಾಳೆ. ಗಂಡನ ತಪ್ಪು ಏನೂ ಇಲ್ಲ. ಆತನಿಗೆ ಏನೂ ಮಾಡಬೇಡಿ ಎಂದಿದ್ದಾಳೆ. ಕಾವ್ಯಾ ಒಂದೂವರೆ ವರ್ಷದ ಹಿಂದೆ ಯಾಕನೂರು ಗ್ರಾಮದ ಚಂದ್ರಶೇಖರ್ ಜತೆ ವಿವಾಹವಾಗಿದ್ದಳು. ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ ಜತೆ ಕಲಹ ನಡೆಯುತ್ತಿತ್ತು.
ನನ್ನ ಮಗನಿಂದ ನನ್ನನ್ನು ದೂರ ಮಾಡಿದ್ದೀಯ ಎಂದು ಕಾವ್ಯಾಳಿಗೆ ಅತ್ತೆ ಪುಟ್ಟಮಾದಮ್ಮ ಕಿರುಕುಳ ನೀಡುತ್ತಿದ್ದ. ಅತ್ತೆ ಕಿರುಕುಳಕ್ಕೆ ಬೇಸತ್ತ ಕಾವ್ಯ 3 ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಮೃತಪಟ್ಟಿದ್ದಾಳೆ.
ಕಾವ್ಯಾ ಪಾಲಕರು ಆಕೆಯ ಅತ್ತೆ ಮತ್ತು ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಕಾವ್ಯಾಗೆ ತನ್ನ ತಾಯಿ ಕಿರುಕುಳ ನೀಡಲು ಸುರೇಶ್​ ಕೂಡ ಸಾಥ್​ ನೀಡಿದ್ದಾನೆಂದು ಆರೋಪಿಸಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ದಿಗ್ವಿಜಯ ನ್ಯೂಸ್​)
ನಿಮ್ಮ ಫೋನ್ ಕಳವಾಗಿದೆಯೇ/ ಕಳೆದು ಹೋಗಿದೆಯೇ? ಗೂಗಲ್​ನ ಈ ಫೀಚರ್​ನಿಂದ ಮರಳಿ ಪಡೆಯಬಹುದು!

ಸೆಕ್ಸ್​ ಬಗ್ಗೆ ಮಾತಾಡೋ ಹುಡ್ಗಿರ್ಗೆ 5 ಲಕ್ಷ! 3 ವರ್ಷದಲ್ಲಿ 75 ಕೋಟಿ ಗಳಿಸಿ ತಗ್ಲಾಕೊಂಡ ಯೂಟ್ಯೂಬರ್​ ದಂಪತಿ

ಬಾಯ್​ಫ್ರೆಂಡ್​ಗಾಗಿ ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿದ ಶ್ರೀಲಂಕಾ ಬ್ಯೂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seventeen =
Remember me
