ಮೈಸೂರು:ಕಾಡು ಪ್ರಾಣಿಗಳ ಬೇಟೆಗೆ ಇರಿಸಲಾಗಿದ್ದ ಸಿಡಿಮದ್ದು ತಿಂದ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ. ನಾಟಿ ಸಿಡಿಮದ್ದಿನ ಸ್ಫೋಟದ ರಭಸಕ್ಕೆ ಜಾನುವಾರುವಿನ ಮುಖ ಛಿದ್ರವಾಗಿದೆ.
ಈ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವೆಂಕಟರಾಮು ಎಂಬುವರಿಗೆ ಸೇರಿದ ಜಾನುವಾರು ಸ್ಥಿತಿ ಇದೀಗ ಚಿಂತಾಜನಕವಾಗಿದೆ.
ಇದನ್ನೂ ಓದಿ:ಚಿತ್ರದಲ್ಲಿ ಅಡಗಿರೋ ಸುಂದರಿಯ ಗುರುತಿಸುವಿರಾ?ಫೋಟೋ ಕ್ಲಿಕ್​ ಮಾಡಿ… ಝೂಮ್​ ಮಾಡಿ…
ಸ್ಥಳ ಪರಿಶೀಲನೆ ಮಾಡಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಸಿಡಿಮದ್ದು ತಯಾರಿಸಿದ ಆರೋಪಿ ಸೂರಳ್ಳಿ ಗ್ರಾಮದ ಚಿಕ್ಕ ನಾಯಕನನ್ನು ಬಂಧಿಸಿದ್ದಾರೆ.
ಅಂಬಳೆ ಗ್ರಾಮದ ಹೊರವಲಯದ ಕೆರೆಯ ಸಮೀಪ ಕಾಡು ಹಂದಿಗಳನ್ನು ಬೇಟೆಯಾಡಲು ಆರೋಪಿ ಚಿಕ್ಕನಾಯಕ ಸಿಡಿಮದ್ದು ತಯಾರಿಸಿದ್ದ. ಕೆರೆಗೆ ನೀರು ಕುಡಿಯಲು ತೆರಳಿದ ಹಸು ಸಿಡಿಮದ್ದು ತಿಂದಿದೆ. ಬಾಯಲ್ಲೇ ಸ್ಫೋಟಗೊಂಡಿದ್ದರಿಂದ ಬಾಯಿ ಛಿದ್ರವಾಗಿದೆ.(ದಿಗ್ವಿಜಯ ನ್ಯೂಸ್​)
ಚಳಿಗಾಲದಲ್ಲಿ ಕರೊನಾ ಹೆಚ್ಚಳ: ದಿನವೊಂದಕ್ಕೆ 15 ಸಾವಿರ ಪ್ರಕರಣ, ಎನ್​ಸಿಡಿಸಿ ಎಚ್ಚರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
