ಮೈಸೂರು:ಮದುವೆಗೆ ಪೋಷಕರು ನಿರಾಕಿರಿಸಿದಕ್ಕೆ ಅಪ್ರಾಪ್ತೆಯ ಅಪಹರಿಸಿರುವ ಘಟನೆ ನಂಜನಗೂಡಿನ ಗೋಳೂರು ಗ್ರಾಮದಲ್ಲಿ ನಡೆದಿದೆ.
15 ವರ್ಷದ ಅಪ್ರಾಪ್ತೆಯನ್ನು ಅದೇ ಗ್ರಾಮ ಶಶಿ ಎಂಬಾತ ಅಪಹರಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಅಪಹರಣಕ್ಕೆ ಶಶಿ ತಂದೆ ಪುಟ್ಟಯ್ಯ ಮತ್ತು ದೊಡ್ಡಪ್ಪ ಮಹದೇವು ಸಹ ಕೈಜೋಡಿಸಿರುವ ಆಪಾದನೆ ಇದೆ.
ಘಟನೆಯ ವಿವರಣೆಗೆ ಬರುವುದಾದರೆ, ಮದುವೆ ಮಾಡಿಕೊಡುವಂತೆ 3 ತಿಂಗಳ ಹಿಂದೆ ಶಶಿ, ಆತನ ತಂದೆ ಹಾಗೂ ದೊಡ್ಡಪ್ಪ ಅಪ್ರಾಪ್ತೆಯ ಪಾಲಕರ ಬಳಿ ಕೇಳಿಕೊಂಡಿದ್ದರಂತೆ. ಆದರೆ, ಹುಡುಗಿ ಅಪ್ರಾಪ್ತೆಯಾದ್ದರಿಂದ ಪಾಲಕರು ಮದುವೆಗೆ ನಿರಾಕರಿಸಿದ್ದರು.
ಇದನ್ನೂ ಓದಿರಿ:ವೇಶ್ಯೆಯ ಸಹವಾಸ ಮಾಡಿ 33 ವರ್ಷಗಳ ದಾಂಪತ್ಯ ಮುರಿದುಹೋಗಿದ್ದಾರೆ- ಒಂಟಿ ಜೀವಕ್ಕೊಂದು ದಾರಿತೋರಿ ಪ್ಲೀಸ್‌…
ಇದೇ ವೇಳೆ ಮದುವೆ ಮಾಡಿಕೊಡದಿದ್ದಲ್ಲಿ ಪರಿಣಾಮ ಎದುರಿಸುತ್ತೀರ ಎಂದು ಶಶಿ ತಂದೆ ಹಾಗೂ ದೊಡ್ಡಪ್ಪ ಅವಾಜ್​ ಹಾಕಿದ್ದರು. ಹೀಗಿರುವಾಗ ಇದೇ ಫೆಬ್ರವರಿ 17ರಂದು ಬಾಲಕಿ ದಿಢೀರ್​ ನಾಪತ್ತೆಯಾಗಿದ್ದಾಳೆ.
ಮಗಳು ಕಾಣೆಯಾದ ಆತಂಕದಿಂದ ಆಕೆಯ ಪಾಲಕರು ನಾಲ್ಕು ದಿನಗಳ ಕಾಲ ಹುಡುಕಾಡಿದ್ದಾರೆ. ಇದರ ನಡುವೆ ಅಪ್ರಾಪ್ತೆಯನ್ನು ಶಶಿ ಅಪಹರಣ ಮಾಡಿರುವ ಮಾಹಿತಿ ದೊರಕಿದೆ. ಇದೀಗ ಮಗಳನ್ನು ಅಪಹರಿಸಿದ್ದಾರೆಂದು ಶಶಿ, ತಂದೆ ಪುಟ್ಟಯ್ಯ ಮತ್ತು ದೊಡ್ಡಪ್ಪ ಮಹದೇವು ವಿರುದ್ಧ ದೂರು ನೀಡಿದ್ದಾರೆ.
ಅಪ್ರಾಪ್ತೆಯ ತಾಯಿ ಸುಮತಿ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೊಂದೆಡೆ ಅಪಹರಣಕ್ಕೊಳಗಾದ ಬಾಲಕಿಯನ್ನು ನೆನೆದು ಅಜ್ಜಿ ನಿಂಗಮ್ಮ ಅಳಲು ತೋಡಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆಯೇ ಆದ್ಯತೆ?

ಪ್ರಾಮಾಣಿಕತೆ ಮೆರೆದ ವಿಆರ್​ಎಲ್ ಟ್ರಾವಲ್ಸ್ ಸಿಬ್ಬಂದಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:16 − 12 =
Remember me
