ಮೈಸೂರು:‘ಅಪ್ಪ-ಅಮ್ಮ ಪ್ಲೀಸ್​… ನನ್ನನ್ನು ದಯವಿಟ್ಟು ಕ್ಷಮಿಸಿ. ಏನೇ ಕಷ್ಟ ಬಂದರೂ ಇದುವರೆಗೆ ನಾನು ಹೇಡಿತನ ಮಾಡಿರಲಿಲ್ಲ. ಅದಕ್ಕೆ ಸಿಕ್ಕ ಪ್ರತಿಫಲ ಈ ಅವಮಾನ. ಕೊಲೆಯಾದ ಜಾಗದಲ್ಲಿ ಇದ್ದ ಮಾತ್ರಕ್ಕೆ ಅವರೇ ಕೊಲೆಗಾರ ಆಗುವುದಿಲ್ಲ. ನಾನು ಏನೂ ಮಾಡದಿದ್ದರೂ ನನ್ನನ್ನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ಅವಮಾನ ಸಹಿಸಲು ಆಗ್ತಿಲ್ಲ… I AM VERY SORRY MOM DAD. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ…’ ಎಂದು ಡೆತ್​ನೋಟ್​ ಬರೆದಿಟ್ಟು ಮೈಸೂರಿನ ಫೋಟೋಗ್ರಾಫರ್​ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಭಿಷೇಕ ಮೃತ ಯುವಕ. ಮೈಸೂರಿನ ಅಶೋಕಪುರಂ ಠಾಣೆ ಪೊಲೀಸರ ಹೆಸರು ಪ್ರಸ್ತಾಪಿಸಿ ಸಾವಿನ ಮನೆಯ ಕದತಟ್ಟಿರುವುದು ದುರಂತ. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರ ವಿಚಾರಣೆ ಎದುರಿಸಿ ಬಂದ ಬೆನ್ನಲ್ಲೇ ಯುವಕನ ಆತ್ಮಹತ್ಯೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಗಾಂಜಾ ಸೇವನೆ ಆರೋಪದಡಿ ಪೊಲೀಸ್ ವಿಚಾರಣೆಯನ್ನ ಇತ್ತೀಚಿಗೆ ಅಭಿಷೇಕ ಎದುರಿಸಿದ್ದ.
‘ಸ್ನೇಹಿತನೊಬ್ಬನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ನಾನು ತೆರಳಿದ್ದೆ. ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಗಾಂಜಾ ಸೇವನೆ ಮಾಡಿದವರ ಜತೆಗೆ ನನ್ನನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು. ನೀನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳನ್ನ ಸಹಿಸಲು ನನ್ನಿಂದ ಅಸಾಧ್ಯ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರೂ ಕೊಲೆಗಾರ ಆಗುವುದಿಲ್ಲ. ಅಪ್ಪ- ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
3 ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕಟ್ಟೆ! ತುರುವೇಕೆರೆಯಲ್ಲಿ ದುರ್ಘಟನೆ

ಸ್ಯಾಂಡಲ್​ವುಡ್​ ನಟ ಧನುಷ್​ ನಿಧನ; ಇಂದು ಅಂತ್ಯಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
