ಮೈಸೂರು:ಆರು ತಿಂಗಳ ಹಿಂದೆಯೇ ಮಲೇಷ್ಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಯುವಕನೊಬ್ಬನ ಮೃತದೇಹ ಇದೀಗ ಹುಟ್ಟೂರಿಗೆ ಆಗಮಿಸಿದ್ದು, ಕಣ್ಣೀರಿನ ನಡುವೆಯೇ ಕೊನೆಗೂ ಮಗನ ಅಂತ್ಯಕ್ರಿಯೆ ನೆರವೇರಿಸಿ ತಾಯಿ ಸಮಾಧಾನ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕ್ಯಾಮೆರಾಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ್ರು!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ಸುಮಂತ್ (22) ಕಳೆದ ಡಿಸೆಂಬರ್​ನಲ್ಲಿ ಕೆಲಸಕ್ಕೆಂದು ಮಲೇಷ್ಯಾಗೆ ತೆರಳಿದ್ದರು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ, ಮಧ್ಯವರ್ತಿಯೊಬ್ಬ ಸುಮಂತ್​ರನ್ನು ಕೊರೆದೊಯ್ದಿದ್ದ. ಆದರೆ, ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚಿಸಿದ್ದ.
ಇದನ್ನೂ ಓದಿ:ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಇದರಿಂದ ಮನನೊಂದಿದ್ದ ಸುಮಂತ್​ ಮರಳಿ ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದ. ಅಷ್ಟರಲ್ಲಾಗಲೇ ಸುಮಂತ್​ ಮೃತಪಟ್ಟಿರುವ ವಿಚಾರವನ್ನು ಸಹೋದ್ಯೋಗಿಗಳು ತಾಯಿಗೆ ತಿಳಿಸಿದ್ದರು. ಈ ವಿಚಾರ ಕೇಳಿದ ತಾಯಿಯ ಹೃದಯ ಶಾಕ್​ಗೆ ಒಳಗಾಗಿತ್ತು. ಮಗನ ನಿಗೂಢ ಸಾವು ನುಂಗಲಾರದ ತುತ್ತಾಗಿತ್ತು.

ಆದರೂ ನೋವಿನಲ್ಲೇ ಸಾವಿನ ತನಿಖೆ ಹಾಗೂ ಮೃತದೇಹವನ್ನು ತರಿಸಿಕೊಳ್ಳಲು ಭಾರತದ ರಾಯಭಾರ ಕಚೇರಿಗೆ ಸುಮಂತ್​ ಪಾಲಕರು ಮನವಿ ಮಾಡಿದ್ದರು. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶವ ಕಳುಹಿಸುವುದು ಆರು‌ ತಿಂಗಳ ತಡವಾಗಿತ್ತು. ಇದೀಗ ಸುಮಂತ್​ ಶವ ತಡವಾಗಿ ಆಗಮಿಸಿದ್ದು, ನಗು ನಗುತ್ತಾ ಹೋದ ಮಗ ಶವವಾಗಿ ಬಂದಿದ್ದನ್ನು ಕಂಡ ಪಾಲಕರ ಆಕ್ರಂದನ ಮುಗಿಲು ಮಟ್ಟಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:PHOTOS| ಆರ್​ಜಿವಿಯ ಮುಂದಿನ ಚಿತ್ರದ ನಾಯಕಿಯ ಹಾಟ್​ ಫೋಟೋಗಳನ್ನು ನೋಡಿದ್ರೆ ಫಿದಾ ಗ್ಯಾರೆಂಟಿ!

ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
